Belagavi NewsBelgaum NewsKannada NewsKarnataka NewsLatest

*ಭಾನುವಾರ ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠಾ ಕೃತಿಯ ಲೋಕಾರ್ಪಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖ್ಯಾತ ಸಾಹಿತಿ ಡಾ. ಸರಜೂ ಕಾಟ್ಕರ್ ಬರೆದಿರುವ ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠಾ ಕೃತಿಯು ಭಾನುವಾರ ಲೋಕಾರ್ಪಣೆಗೊಳ್ಳಲಿದೆ.

Home add -Advt

ಅಂದು ಮುಂಜಾನೆ 10.30ಕ್ಕೆ ರಾಮದೇವ ಹೊಟೇಲ್ ಹಿಂಬದಿ ಇರುವ ಕನ್ನಡ ಭವನದಲ್ಲಿ ಕಾರ್ಯಕ್ರಮ ಜರುಗಲಿದೆ.

ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠಾ ಕೃತಿಯನ್ನು ಲೋಕಾರ್ಪಣೆಗೊಳಿಸುವರು.

ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ.ಗುರುದೇವ ಹುಲೆಪ್ಪನವರಮಠ ಕೃತಿ ಪರಿಚಯ ಮಾಡುವರು.

Related Articles

Back to top button