Kannada NewsKarnataka News

ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ: ಕಣ್ತುಂಬಿಕೊಂಡು ಸಂಭ್ರಮಿಸಿದ ನಿಪ್ಪಾಣಿಗರು

 ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಸ್ಥಳೀಯ ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ, ಮ್ಯಾಗ್ನಂ ಟಫ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಚಾಲನೆ ನೀಡಿದರು.

ಎರಡು ದಿನಗಳ ಈ ಉತ್ಸವದಲ್ಲಿ ಮೊದಲನೇಯ ದಿನ ವಿವಿಧ ಕಲಾಕೃತಿಯ, ವಿವಿಧ ರಂಗುರಂಗಿನ ಗಾಳಿಪಟಗಳು ಆಗಸದಲ್ಲಿ ರಾರಾಜಿಸುತ್ತಿದ್ದ ದೃಶ್ಯಗಳನ್ನು ನಾಗರಿಕರು, ವಿವಿಧ ಶಾಲಾ-ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಕಣ್ತುಂಬಿಕೊಂಡರು. ಸ್ವಿಟ್ಜರ್ಲೆಂಡ್, ಇಂಗ್ಲಂಡ್, ಲಿಥೋಪಿಯಾ, ಎಸ್ಟೋನಿಯಾ, ಮೊದಲಾದ ವಿದೇಶಗಳಲ್ಲಿಯ, ರಾಜ್ಯ ಸೇರಿದಂತೆ, ಮಹಾರಾಷ್ಟ್ರ, ಪಂಜಾಬ್, ಗುಜರಾಥ, ಹರಿಯಾಣಾ, ರಾಜಸ್ಥಾನ, ದೆಹಲಿ, ಓರಿಸ್ಸಾ, ಮೊದಲಾದ ರಾಜ್ಯಗಳಲ್ಲಿಯ ಗಾಳಿಪಟ ವೀರರೊಂದಿಗೆ ಸ್ಥಳೀಯ ಕ್ರೀಡಾಪಟುಗಳೂ ಸಹ ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ’ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾತಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಉಳಿದ ವೇಳೆ ಯಾವುದೇ ಪಕ್ಷದ ಭೇದಭಾವವಿಲ್ಲದೆ ಕಾರ್ಯ ಮಾಡುತ್ತಿದ್ದೇವೆ. ಗಾಳಿಪಟ ಹಾರಿಸಲು ಅದನ್ನು ತಯಾರಿಸುವ ವಿಶೇಷ ಕಲೆ ಬೇಕಾಗುತ್ತದೆ. ಅದನ್ನು ಹೊಸ ಪೀಳಿಗೆ ಅಳವಡಿಸಿಕೊಳ್ಳಬೇಕು’ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ ’ಜೊಲ್ಲೆ ದಂಪತಿ ಸಾಮಾಜಿಕ, ರಾಜಕಾರಣದೊಂದಿಗೆ ಕ್ಷೇತ್ರದ ಜನತೆಗೆ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಮೊದಲಾದ ವಿವಿಧ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಉಣಬಡಿಸುತ್ತಿರುವುದು ಶ್ಲಾಘನೀಯ. ಇದರಿಂದ ಯುವವರ್ಗ ಸಹಿತ ಎಲ್ಲ ವರ್ಗದ ಜನರಿಗೆ ಸ್ಫೂರ್ತಿ ಸಿಗುತ್ತದೆ. ಇಂತಹ ಅಂತರರಾಷ್ಟ್ರೀಯ ಉತ್ಸವಗಳ ಸೊಬಗನ್ನು ಸ್ಥಳೀಯರು ಪ್ರಯೋಜನ ಪಡೆಯಬೇಕು’ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಗಾಳಿಪಟ ಮಹಾಮಂಡಳಿಯ ಸಂಯೋಕ ಸಂದೇಶ ಕಟ್ಟಿ, ಅಶೋಕ ನಾಯಿಕ, ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ಮತ್ತು ಸಂಚಾಲಕರು, ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂದೇಶಾ ಮತ್ತು ಸದಸ್ಯರು, ಸುರೇಶ ಶೆಟ್ಟಿ, ಮಹಾಲಿಂಗೇಶ ಕೋಠಿವಾಲೆ, ಪ್ರತಾಪ ಪಟ್ಟಣಶೆಟ್ಟಿ, ಜೊಲ್ಲೆ ಗ್ರುಪ್‌ನ ಇವೆಂಟ್ ನಿರ್ದೇಶಕ ವಿಜಯ ರಾವುತ, ಮೊದಲಾದವರು ಸಹಿತ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯಲ್ಲಿ ನಾಗರಿಕರು ಉಪಸ್ಥಿತರಿದ್ದರು.

*ಬೆಳಗಾವಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ*

https://pragati.taskdun.com/amith-shahbelagavivisitjana-sankalpa-yatre/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button