Kannada NewsKarnataka News
ಶ್ರೀ ವಿಠ್ಠಲ ರುಕ್ಮಾಯಿಯ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ; ರಸ್ತೆ ಕಾಮಗಾರಿಗೆ ಗ್ರಾಮಸ್ಥರಿಂದ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೊಕಮೂರ ಗ್ರಾಮದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶ್ರೀ ವಿಠ್ಠಲ ರುಕ್ಮಾಯಿಯ ಸಪ್ತಾಹ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಚಾಲನೆ ನೀಡಿದರು.
ಇದೇ ವೇಳೆ, ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಜೂರು ಮಾಡಿಸಿರುವ 60 ಲಕ್ಷ ರೂ, ವೆಚ್ಚದ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಭುಜಂಗ ಸಾಂವಗಾಂವ್ಕರ್, ಶಿವಾಜಿ ಪಾಟೀಲ, ಸುಖದೇವಿ ಕಾಂಬಳೆ, ಶೀತಲ್ ಸುತಾರ, ಬಾಲಾಜಿ ಪಾಟೀಲ, ಬಾಬುರಾವ ದಳ್ವಿ, ಯಲ್ಲಪ್ಪ ಸಾಂವಗಾಂವ್ಕರ್, ಕಲ್ಲಪ್ಪ ಚೌಗುಲೆ, ನಾರಾಯಣ ಪಾಟೀಲ, ಮಹಾದೇವ ಪಾಟೀಲ, ಮನೋಹರ ಕಾಂಬಳೆ, ಮಾರುತಿ ಪಾಟೀಲ, ಮಲ್ಲಪ್ಪ ಪಾಟೀಲ, ಮದನ ಬಿಜಗರಣಿಕರ್, ಕೇದಾರಿ ಕೇಸರಕರ್, ಉಮೇಶ ಬಿಜಗರಣಿಕರ್, ನಾರಾಯಣ ಸಾಂವಗಾಂವ್ಕರ್, ಭರ್ಮಾ ಸಾಂವಗಾಂವ್ಕರ್, ಭುಷನ್ ಪಾಟೀಲ, ವಿರಾಟ್ ಕಮತೆಕರ್, ಸತೀಶ್ ಕಾಂಬಳೆ, ಅಜಯ ಮೋಟನಕರ್, ಬಾಬು ಪಾಟೀಲ, ಮಹಾದೇವ ಮೋಟನಕರ್, ಯಲ್ಲಪ್ಪ ಬಿಜಗರಣಿಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/latest/two-boyswashed-awayesale-lakesirsiuttara-kannada/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ