Kannada NewsKarnataka NewsLatest

ಟ್ರೆಂಡ್ಸ್ ನ “ಅವಂತ್ರ” ರಾಷ್ಟ್ರದ 2ನೇ ಶೋರೂಂ ಬೆಳಗಾವಿಯಲ್ಲಿ ಶುಕ್ರವಾರ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೌಸ್ ಆಫ್ ಟ್ರೆಂಡ್ಸ್ ನ ಹೊಸ ಕಾನ್ಸೆಪ್ಟ್ ಸ್ಟೋರ್ “ಅವಂತ್ರ ”   ಬೆಳಗಾವಿಯಲ್ಲಿ ಶುಕ್ರವಾರ ಆರಂಭವಾಗಲಿದೆ. ಇದು ರಾಷ್ಟ್ರದ 2ನೇ ಶೋರೂಂ ಆಗಿದೆ.

ಸೀರೆ, ಬ್ಲೌಸ್, ಕುರ್ತಾಸ್, ಆಭರಣ, ಪಾದರಕ್ಷೆ, ಮತ್ತಿತರ ಪರಿಕರಗಳ, ಸಮಕಾಲೀನ ಮಹಿಳೆಗೆ ಒಂದು ಅನನ್ಯ ಅನುಭವದ ಅಂಗಡಿ ಇದಾಗಿದ್ದು, ಸಂಪ್ರದಾಯವನ್ನು ಗೌರವಿಸುತ್ತ, ಇಂಡಿಯನ್ ಮತ್ತು ಎಥ್ನಿಕ್ ಎಲ್ಲವನ್ನೂ  ಹೊಂದಿರುವ ಮಳಿಗೆ ಇದು ಎಂದು ಟ್ರೆಂಡ್ಸ್ ಹೇಳಿಕೊಂಡಿದೆ.

ಭಾರತದ ಅತ್ಯುತ್ತಮ ಎಥ್ನಿಕ್ ಉಡುಪುಗಳ ಮನೆ  “ಅವಂತ್ರ ಬೈ ಟ್ರೆಂಡ್ಸ್” ಆಗಿದ್ದು, ಸೀರೆಗಳು, ಬ್ಲೌಸ್‌ಗಳು, ಕುರ್ತಾಗಳು, ಆಭರಣಗಳು, ಪಾದರಕ್ಷೆಗಳು, ಪರಿಕರಗಳು ಮತ್ತು ಹೆಚ್ಚಿನವುಗಳ ವೈವಿಧ್ಯಮಯ ಕರಕುಶಲ ಕಲೆಯ ವಸ್ತುಗಳನ್ನು ಒಳಗೊಂಡಿರುವ ಅಪರೂಪದ ಶೋರೂಂ ಇದಾಗಿದೆ.

ಕೃಷ್ಣದೇವರಾಯ ವೃತ್ತ(ಕೊಲ್ಲಾಪುರ ಸರ್ಕಲ್ )ದ ಬಳಿಯ ಗೀತ -ಗಂಗಾ ಕಟ್ಟಡದಲ್ಲಿ ನೂತನ ಶೋ ರೂಂ ಶುಕ್ರವಾರ ಸಂಜೆ 5 ಗಂಟೆಗೆ ಗ್ರಾಹಕರಿಗೆ ಮುಕ್ತವಾಗಲಿದೆ.

Home add -Advt

ರಾಷ್ಟ್ರದಲ್ಲೇ 2ನೇ ಶೋ ರೂಂನ್ನು ಬೆಳಗಾವಿಯಲ್ಲಿ ತೆರೆಯುತ್ತಿರುವುದು ವಿಶೇಷವಾಗಿದೆ.

 

 

Related Articles

Back to top button