Kannada NewsLatest

ಕುಸ್ತಿ, ಕಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಶ್ರೀ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಾಂಗ್ರೆಸ್ ಮುಖಂಡ ಪದ್ಮಜಿತ್ ನಾಡಗೌಡ ಅವರ ಪ್ರಯೋಜಕತ್ವದಲ್ಲಿ ನಡೆದ ಕುಸ್ತಿ, ಕಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧಾ ಕಾರ್ಯಕ್ರಮಕ್ಕೆ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ  ಭಾಗವಹಿಸಿ ಚಾಲನೆ ನೀಡಿದರು.

Home add -Advt

ಅಪಾರ ಸಂಖ್ಯೆಯ ಜನ ಸೇರಿ ಕುಸ್ತಿ ಪಂದ್ಯ ವೀಕ್ಷಿಸಿ ಸಂಭ್ರಮಪಟ್ಟರು. ಹೆಸರಾಂತ ಹಾಗೂ ಉದಯೋನ್ಮುಖ ಮಲ್ಲರು ಸೆಣಸಾಡಿ ಬಹುಮಾನಗಳನ್ನು ಪಡೆದರು. ಕಬಡ್ಡಿ ಹಾಗೂ ಭಾರ ಎತ್ತು ಸ್ಪರ್ಧೆಗಳು ಸಹ ಜರುಗಿದವು. ಚಿಣ್ಣರ ಕುಸ್ತಿ ಪಂದ್ಯಗಳು ಜನಮನ ಸೆಳೆದವು.

ಈ ಸಂದರ್ಭದಲ್ಲಿ ಕೃಷ್ಣಾ ಕಿತ್ತೂರಿನ ಗುರುದೇವಾಶ್ರಮದ ಬಸವಪ್ರಭು ಸ್ವಾಮೀಜಿ, ಜಾತ್ರಾ ಕಮಿಟಿ ಅಧ್ಯಕ್ಷ ಅಪ್ಪಾಸಾಬ ನಾಡಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿದ್ದಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಶ್ರೀ ಧರೆಪ್ಪ ಠಕ್ಕಣ್ಣವರ, ಗ್ರಾಮದ ಹಿರಿಯರಾದ ಆರ್. ಎ. ಪಾಟೀಲ, ಮುಖಂಡರಾದ ನಾರಾಯಣ ಘೋರ್ಪಡೆ, ಪರಶುರಾಮ ಕೋಳೆಕರ, ರೆಹಮಾನ್ ಮುಲ್ಲಾ, ಬಾಬಾಲಾಳ ನದಾಫ, ರಾಹುಲ್ ಹಳಿಂಗಳಿ,ಮೌಲಾಸಾಬ ಮುಲ್ಲಾ, ಅಶೋಕ ಐಗಳಿ, ದಶಕೀರ ನದಾಫ, ಬಾಲೇಶ್ ಹೊಸೂರ, ಹಾರುನ ಮುಲ್ಲಾ, ಕಾಸಪ್ಪ ಕಾಂಬಳೆ, ಇಸ್ಮಾಯಿಲ್ ಕರಿಸಾಬ, ಯಲ್ಲಪ್ಪ ಕಾಂಬಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.

ರಂಗೋಲಿಯಲ್ಲಿ ಮೂಡಿಬಂದ ಲಕ್ಷ್ಮೀ, ಮಹಾಲಕ್ಷ್ಮೀ, ಚನ್ನರಾಜ ; ಅಭಿಯಾನಕ್ಕೆ ಜೈ ಎಂದ ಕ್ಷೇತ್ರದ ಜನ

https://pragati.taskdun.com/rangavalli-campaign-concludes-lakshmi-mahalakshmi-channaraja-in-rangoli/

ರವಿ ಕೋಕಿತ್ಕರ್ ಮೇಲಿನ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ: ಪ್ರಮೋದ ಮುತಾಲಿಕ್ ಆರೋಪ

https://pragati.taskdun.com/police-negligence-in-ravi-kokitkar-shootout-case-pramoda-muthalik-alleges/

*ಬೆಳಗಾವಿ: ಮತ್ತೋರ್ವ ವ್ಯಕ್ತಿಯ ಬರ್ಬರ ಹತ್ಯೆ*

https://pragati.taskdun.com/belagavinandagadaman-murde/

Related Articles

Back to top button