ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಹೆಲ್ಮೆಟ್ ಧರಿಸದ ವಿಚಾರವಾಗಿ ಪೊಲಿಸ್ ಸಿಬ್ಬಂದಿಗಳು ವಕೀಲರೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ ಪಿ ವಿಕ್ರಂ ಆಮ್ಟೆ ಆದೇಶ ಹೊರಡಿಸಿದ್ದಾರೆ.
ವಕೀಲ ಪ್ರೀತಂ ಎಂಬುವವರು ನಿನ್ನೆ ಸಂಜೆ ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದರು. ವಕೀಲರನ್ನು ತಡೆದ ಪೊಲೀಸರು ಹೆಲ್ಮೆಟ್ ಹಾಕದೇ ಇರುವುದಕ್ಕೆ ಬೈದಿದ್ದಾರೆ. ಅಲ್ಲದೇ ಬೈಕ್ ಕೀ ಎತ್ತಿಕೊಂಡು ದಂಡ ಪಾವತಿಸಲು ಸೂಚಿಸಿದ್ದಾರೆ. ದಂದ ಪಾವತಿಸಲು ಒಪ್ಪಿದರೂ ವಕೀಲನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ವಕೀಲ ಪ್ರೀತಂ ಅವರನ್ನು ಪೊಲಿಸ್ ಠಾಣೆಗೆ ಕರೆ ತಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಗಾಯಾಳು ವಕೀಲ ಪ್ರೀತಂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೀಗ ವಕೀಲನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಠಾಣೆಯ ಪಿಎಸ್ ಐ, ಓರ್ವ ಎ ಎಸ್ ಐ, ಓರ್ವ ಹೆಡ್ ಕಾನ್ಸ್ ಟೇಬಲ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಐಪಿಸಿ ಸೆಕ್ಷನ್ 307, 324, 504, ಮತ್ತು 506 ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, 6 ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ