ಹುಕ್ಕೇರಿ ವಕೀಲರ ಸಭಾಭವನದಲ್ಲಿ ತಹಶೀಲ್ದಾರ ನಡೆ ಖಂಡಿಸಿ ಸಭೆ
ಪ್ರಗತಿವಾಹಿನಿ ಸುದ್ದಿ – ಹುಕ್ಕೇರಿ : ಹಲವಾರು ತಿಂಗಳಿನಿಂದ ಹುಕ್ಕೇರಿ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟ ಅವರು ವಕೀಲರ ಜೊತೆಗೆ ಸರಿಯಾಗಿ ಸ್ಪಂದಿಸದೆ ಕೋರ್ಟ ನೆಪದಲ್ಲಿ ಗಂಟೆಗಂಟಲೆ ಬಾಗಿಲಲ್ಲಿ ನಿಲ್ಲಿಸುವುದು ಆರ್‌ಟಿಜಿಎಸ್ ದಂತ ಪ್ರಕರಣಲ್ಲಿ ನೇರವಾಗಿ ಕ್ಷಕ್ಷಿದಾರರ ಜೊತೆ ಹಣದ ವ್ಯವಹಾರ ಮಾತನಾಡುವುದು.
ಕಕ್ಷಕಿದಾರರ ಮುಂದೆ ವಕೀಲರಿಗೆ ಅವಮಾನ ಪಡಿಸುವ ರೀತಿಯಲ್ಲಿ ವರ್ತಿಸುವುದು ಇನ್ನಿತರ ವಿಷಯಗಳ ಬಗ್ಗೆ ವಕೀಲರು ತಹಶೀಲ್ದಾರ ವಿರುದ್ದ ಮಂಗಳವಾರ ಕೋರ್ಟ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಅರ್ಪಿಸಲು ತಿರ್ಮಾನಿಸಿದ್ದರು.
ಅದರೆ ಕೆಲಹಿರಿಯ ವಕೀಲರು ಮಧ್ಯಸ್ಥಿಕೆ ವಹಿಸಿ ತಹಶೀಲ್ದಾರ ಅವರನ್ನು ಸಂಘದ ಸಭಾಭವನಕ್ಕೆ ಕರೆಸಿ ಮಾತುಕತೆ ನಡೆಸುತ್ತಿರುವಾಗ ಕೆಲವು ವಕೀಲರು ತಹಶೀಲ್ದಾರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿಗಳಾದ ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ, ಬಿವಿ.ಪಾಸಪ್ಪಗೋಳ ಮಾತನಾಡಿ ನಾವು ಕೂಡ ವಕೀಲರ ಶಿಕ್ಷಣ ಅಧಿಕೃತವಾಗಿ ಪ್ರಮಾಣ ಪತ್ರ ಪಡೆದು ಸಾರ್ವಜನಿಕರ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದೇವೆ. ಇಲ್ಲಿಯವರೆಗೂ ತಹಶೀಲ್ದಾರರಿಗೆ ಗೌರವ ನೀಡಿದ್ದೇವೆ. ಆದರೆ ತಾವು ಈ ರೀತಿ ವಕೀಲರ ವೃತಿಗೆ ಅವಮಾನಿಸುತ್ತಿರುವುದು ಸರಿಯಲ್ಲ. ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳಿ, ಪ್ರತಿಯೊಂದು ವಿಷಯದಲ್ಲಿಯೂ ಜನತೆಗೆ ನ್ಯಾಯ ದೊರಕಿಸುವ ಬದಲು ಮುಂದೆ ಹೋಗುವ ಹಂತಕ್ಕೆ ಮಾಡುತ್ತಿರುವುದರಿಂದ ಕಕ್ಷಿದಾರರಿಗೆ ತೊಂದರೆಯಾಗುತ್ತದೆ. ಅಲ್ಲದೆ ನ್ಯಾಯಾಲಯದ ಪ್ರಕರಣದಲ್ಲಿ ಕ್ಷಕಿದಾರರೊಡನೆ ನೇರವಾಗಿ ಚರ್ಚಿಸುವುದು ತಪ್ಪು. ನಿಮ್ಮ ನಡುವಳಿಕೆ ಹಲವು ರೀತಿಗೆ ಅನುಮಾನಕ್ಕೆ ಆಸ್ಪದ ನೀಡುತ್ತದೆ ಎಂದು ತಿಳವಳಿಕೆ ಹೇಳಿದರು.
ತಹಶೀಲ್ದಾರ ರೇಷ್ಮಾ ತಾಳಿಕೋಟಿ ಮಾತನಾಡಿ ನಾನು ಉದ್ದೇಶ ಪೂರ್ವಕವಾಗಿ ವಕೀಲರನ್ನು ಅವಮಾನಿಸುವುದಾಗಲಿ ಅಥವಾ ಸಾರ್ವಜನಿಕರ ಮುಂದೆ ಅಸಭ್ಯವಾಗಿ ವರ್ತಿಸಿ ಮಾತನಾಡಿರುವುದಿಲ್ಲ, ಅದರೂ ಕೂಡ ನದರಚೂಕಿನಿಂದ ಇಂತಹ ಘಟನೆ ನಡೆದಿರಬಹುದು. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆಂದು ಕ್ಷಮೆ ಯಾಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿಕೆ ಅವರಗೋಳ, ಉಪಾಧ್ಯಕ್ಷ ಎಕೆ ಹುಲಿಕಟ್ಟಿ, ಕಾರ್ಯದರ್ಶಿ ಎಚ್. ಎಲ್ಲ ಪಾಟೀಲ ಸದಸ್ಯ ಡಿ,ಆಯ್. ಅಲಗುರಿ. ಎಸ್.ಎ. ಪಾಟೀಲ, ಆರ್.ಪಿ. ಜಳಕಿ,ಎಮ್.ಎಮ್.ಪಾಟೀಲ, ಎಸ್.ಎಸ್.ನಾಗನೂರಿ, ಲಿಂಗರಾಜ ನಾಯಿಕ,ಮಂಜು ಗಸ್ತಿ ಶಿವಾನಂದ ಮರಿನಾಯಕ್ಕ ಮೊದಲಾದವರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ