ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಳಿ ಮಾತೆಯನ್ನು ಸಿಗರೇಟ್ ಸೇದುವ ರೀತಿಯಲ್ಲಿ ಬಿಂಬಿಸಿ ವಿವಾದಾತ್ಮಕ ಡಾಕ್ಯೂಮೆಂಟರಿ ಪೋಸ್ಟರ್ ಬಿಡುಗಡೆ ಸುದ್ದಿಯಾಗಿದ್ದ ನಿರ್ದೇಶಕಿ ಲೀನಾ ಮಣಿ ಮೇಕಳೈ ಇದೀಗ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಿವ-ಪಾರ್ವತಿ ಧೂಮಪಾನ ಮಾಡುತ್ತಿರುವಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಲೀನಾ ಪ್ರಚಾರಕ್ಕಾಗಿಯೇ ಈ ರೀತಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ಪೋಸ್ಟರ್ ಗಳನ್ನು ಹಂಚಿಕೊಳ್ಳುತ್ತಿದ್ದು, ಕ್ಷಮೆಯಾಚಿಸಬೇಕು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಮರ್ಥಿಸಿಕೊಂಡಿರುವ ಲೀನಾ ಮಣಿ ಮೇಕಳೈ, ಶಿವ-ಪಾರ್ವತಿ ವೇಷದಲ್ಲಿರುವ ಕಲಾವಿದರು ಧೂಮಪಾನ ಮಾಡುತ್ತಿರುವ ಪೋಸ್ಟರ್ ತನ್ನ ಸಿನಿಮಾ ಪೋಸ್ಟರ್ ಅಲ್ಲ. ಥಿಯೇಟರ್ ಆರ್ಟಿಸ್ಟ್ ಗಳ ಫೋಟೋ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕಾಳಿ ಡಾಕ್ಯೂಮೆಂಟರಿ ಪೋಸ್ಟರ್ ಬಿಡುಗಡೆ ವೇಳೆ ವಿಡಿಯೋದಲ್ಲಿ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿ ಆಕ್ರೋಶಕ್ಕೆ ಕಾಣವಾಗಿದ್ದ ಲೀನಾ ಇದೀಗ ಮತ್ತೊಂದು ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.
ಕಾಳಿ ಮಾತೆಯ ಬಗ್ಗೆ ಅವಹೇಳನಕಾರಿ ಪೋಸ್ಟರ್; ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ
ಲಂಚ ಸ್ವೀಕರಿಸುವಾಗಲೇ ACB ದಾಳಿ; PSI ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ