ಭಗವದ್ಗೀತೆ ಅಭಿಯಾನ ಒಂದು ಉತ್ಸವ ಆಗಲಿ – ಸ್ವರ್ಣವಲ್ಲೀ ಶ್ರೀ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯನ್ನು ಕೇಂದ್ರವಾಗಿರಿಸಿಕೊಂಡು ನಡೆಯುತ್ತಿರುವ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನದ ಹಿನ್ನೆಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶನಿವಾರ ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥಗೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಶ್ರೀಗಳು, ಅಭಿಯಾನ ಎಂದರೆ ಎಲ್ಲರಿಗೂ ಮುಟ್ಟಿಸುವುದು, ಭಗವದ್ಗೀತೆ ಎಲ್ಲರಿಗೂ ಮುಟ್ಟಬೇಕು. ಕರ್ಮ ಮಾಡಲೇಬೇಕು ಎಂದು ಶ್ರೀಕೃಷ್ಣ ಹೇಳಿದ. ನಾವು ಅವನು ಹೇಳಿದಂತೆ ನಿಷ್ಕಾಮ ಕರ್ಮ ಮಾಡೋಣ. ಅಭಿಯಾನ ಇಡೀ ರಾಜ್ಯದಲ್ಲಿ ಆಗಿದೆ. ಪ್ರತೀ ವರ್ಷ ಒಂದು ಜಿಲ್ಲೆ ಕೇಂದ್ರಿತವಾಗಿ ನಡೆಯುತ್ತಿದೆ. ಈ ವರ್ಷ ಬೆಳಗಾವಿ ಜಿಲ್ಲೆ ಕೇಂದ್ರವಾಗಿದೆ. ಪ್ರಾರಂಭದಲ್ಲಿ ಶ್ರಮ ಹಾಕಿದರೆ ಅಭಿಯಾನ ಯಶಸ್ವೀ ಆಗುತ್ತದೆ. ಭರತೇಶ ಸಂಸ್ಥೆಯ ಸಹಕಾರ ಈ ಹಿಂದಿನಂತೆ ಈ ಬಾರಿಯೂ ಸಿಗಲಿ, ಅಭಿಯಾನ ಒಂದು ಉತ್ಸವ ಆಗಲಿ ಎಂದು ನುಡಿದರು.
ಸಂಸ್ಥೆಯ ಕಾರ್ಯದರ್ಶಿ ವಿನೋದ್ ದೊಡ್ಡಣ್ಣವರ್, ಉಪಾಧ್ಯಕ್ಷ ಶ್ರೀಪಾದ ಖೆಮಲಾಪುರೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂಜೀವ ಅಕ್ಕಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ