Belagavi NewsBelgaum NewsKannada NewsKarnataka NewsNationalPolitics

*ಸಂಸದರಾಗಿ ಬೆಳಗಾವಿಗೆ ಆಗಮಿಸಿದ ಪ್ರಿಯಾಂಕಾ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಕುಂದಾನಗರಿ ಆಗಮಿಸಿದ ಸಂಸದೆ ಪ್ರಿಯಂಕಾ  ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು  ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಪಕ್ಷದ ಕಚೇರಿಯಲ್ಲಿ ಅದ್ಧೂರಿ ಸ್ವಾಗತ ನೀಡಿದರು.

ಇದೇ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಜೈಕಾರವನ್ನು ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.  ಅಲ್ಲದೇ ದಾರಿಯುದ್ದಕ್ಕೂ ಕೈ ಕಾರ್ಯಕರ್ತರು  ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹೂಮಳೆಗೈದರು. ಇದಲ್ಲದೇ  ಇದೇ ವೇಳೆ  ಸಂಸದೆಯಾಗಿ ಆಯ್ಕೆಯಾಗಿ ಮೊದಲ ಬಾರಿಗೆ ನಗರದ ಕಾಂಗ್ರೆಸ್‌ ಭವನಕ್ಕೆ ಆಗಮಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಜಿಲ್ಲಾ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಕಿಸಾನ್ ಕಾಂಗ್ರೆಸ್ ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.

ಟೆಂಪಲ್ ರನ್ ನಡೆಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಕಾಂಗ್ರೆಸ್‌ ಕಚೇರಿಗೆ ಬರುವ ಮೊದಲು ವಿವಿಧ ಮಠಗಳಿಗೆ  ಹಾಗೂ ದರ್ಗಾ ಸೇರದಿಂತೆ  ನಗರದ ಪ್ರಮುಖ ಭಾಗದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ನೂತನ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಪೂಜೆ ಸಲ್ಲಿಸಿದರು. ನಂತರ ಕಾಂಗ್ರೆಸ್‌ ಕಚೇರಿಗೆ ಆಗಮಿಸಿ ಕೈ ಕಾರ್ಯಕರ್ತರ ಸಂಭ್ರಮದ ಹಬ್ಬದಲ್ಲಿ ಪಾಲ್ಗೊಂಡರು.  ಈ ಸಂದರ್ಭದಲ್ಲಿ ಸಂಸದೆ ಪ್ರಿಯಂಕಾ ಜಾರಕಿಹೊಳಿ‌ಗೆ ಯುವ ನಾಯಕ್‌ ರಾಹುಲ್‌ ಜಾರಕಿಹೊಳಿ ಸಾಥ್ ನೀಡಿದರು.

ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿ, ದೆಹಲಿಯ ಸಂಸತ್ ಭವನದಲ್ಲಿ ನಡೆದ ಅಧಿವೇಶನದ ವೇಳೆ ದೊಡ್ಡ ದೊಡ್ಡ ಹಿರಿಯ ನಡುವೆ ನಾನು ಕುಳಿತು ಸಂಸತ ಅಧಿವೇಶನದಲ್ಲಿ ಭಾಗಿಯಾಗಿವುರುವುದು ನನಗೆ ಸಂತಸ ತಂದಿದೆ. ಅಲ್ಲದೇ ಸದ್ಯ ನನ್ನ ಮೇಲೆ ಜವಾಬ್ದಾರಿಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸ ಮಾಡಲಾಗುವುದು ಎಂದರು.

ಕಾಂಗ್ರೆಸಿನ ಹಿರಿಯ ದಿ. ಬಿ. ಶಂಕರಾನಂದ ಅವರು ಪ್ರತಿನಿಧಿಸಿದ್ದ ಕ್ರೇತ್ರವಾದ ಚಿಕ್ಕೋಡಿಯಲ್ಲಿ ನೀವು ಗೆಲುವು ಸಾಧಿಸಿದ್ದು, ನೀವು ಈ ಕ್ಷೇತ್ರವನ್ನು ಯಾವ ರೀತಿ ನೋಡುತ್ತಿದ್ದಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕೋಡಿ ಕ್ಚೇತ್ರದಲ್ಲಿ  ಬಿ. ಶಂಕರಾನಂದಜೀ ಅವರು  ಸಂಸದರಾಗಿದ್ದರು. ಅಂತಹ ಕ್ಷೇತ್ರದಲ್ಲಿ ನನ್ನನ್ನು ಸಂಸದೆಯಾನ್ನಾಗಿ ಆಯ್ಕೆ ಮಾಡಿ ಕ್ಷೇತ್ರದ ಜನತೆ ನನಗೆ ಇನ್ನೂ ಹೆಚ್ಚು ಜವಾಬ್ದಾರಿಗಳನ್ನು ನೀಡಿದ್ದಾರೆ.  ಜನಸಾಮಾನ್ಯರು ಹಾಗೂ ಬಡವರ ಸೇವೆ, ಉದ್ಧಾರಕ್ಕಾಗಿ ಸದಾ ಮುನ್ನುಗ್ಗಿ ನಿಲ್ಲುವ ಕಾರ್ಯ ಮಾಡಲಾಗುವುದು ಎಂದರು.

ಜನರ ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನತೆ ನನ್ನ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದು, ಅವರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಅಲ್ಲದೇ ನಮ್ಮ ತಂದೆಯ ಮೇಲೆ ಸಾಕಷ್ಟು ಮುಖಂಡರು ಹಾಗೂ ಕೈ ಕಾರ್ಯಕಾರ್ಯಕರ್ತರು ಒಡನಾಟ ಹೊಂದಿದ್ದು,  ಅವರ  ಮಾರ್ಗದರ್ಶನದಲ್ಲಿ ಕ್ಷೇತ್ರದ ಮೇಲೆ ಅಭಿವೃದ್ಧಿ ಎಂಬ ಬೆಳಕು ಹರಿಸಲು ನಾನು ಸಾದಾ ಕಟಿಬದ್ಧಳಾಗಿದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದೇ ವೇಳೆ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರಿಗೂ ಸಹ ಕೈ ಕಾರ್ಯಕರ್ತರು ಶಾಲು ಹೊದಿಸಿ ಹುಗುಚ್ಚ ನೀಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ಮುಖಂಡರಾದ ವಿವೇಕ್‌ ಜತ್ತಿ,  ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌ , ರಾಜೇಂದ್ರ ಪಾಟೀಲ್, ಸಿದ್ದಿಕ ಅಂಕಲಗಿ, ಬಸವರಾಜ ಶೇಂಗಾವಿ, ಅರ್ಜುನ ನಾಯಕವಾಡಿ,  ಬಾಳೇಶ ದಾಸನಹಟ್ಟಿ, ಜಂಗ್ಲಿಸಾಬ ನಾಯಿಕ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಅಪಾರ ಸಂಖ್ಯೆ ಮಹಿಳೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button