Latest

ಮಹಿಳೆಯರು ಹೆಚ್ಚಿನ ಸಾಧನೆಯ ಗುರಿ ಹೊಂದಲಿ: ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಗ್ರಾಮೀಣ ಮಹಿಳೆಯರು ನಗರ, ಪಟ್ಟಣಗಳ ಮಹಿಳೆಯರಿಗಿಂತ ಹೆಚ್ಚು ಸಬಲರು ಹಾಗೂ ಸ್ವಾವಲಂಬಿಗಳು. ಪ್ರತಿ ಮಹಿಳೆಯೂ ತನ್ನಲ್ಲಿನ ಸಾಮರ್ಥ್ಯ ಬಳಸಿಕೊಂಡು ಇನ್ನೂ ಹೆಚ್ಚಿನದನ್ನು ಸಾಧಿಸುವ ಗುರಿ ಹೊಂದಬೇಕು ಎಂದು ಬಿಜೆಪಿ ಧುರೀಣೆ ಡಾ.ಸೋನಾಲಿ ಸರ್ನೋಬತ್ ಹೇಳಿದರು.

ಅವರು ತಾಲೂಕಿನ ಹಲಸಾಲ್ ಗ್ರಾಮದಲ್ಲಿ ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳು ಆಯೋಜಿಸಿದ್ದ ಅರಿಷಿಣ- ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿದೆ. ಮಹಿಳೆಯರು ತಮ್ಮ ಜವಾಬ್ದಾರಿಗಳ ಜತೆಗೆ ಹಕ್ಕುಗಳಿಗೂ ಹೆಚ್ಚು ಆದ್ಯತೆ ನೀಡಬೇಕು. ಹಾಗೆ ಮಾಡಿದಲ್ಲಿ ಸಮಾಜದಲ್ಲಿ ಗೌರವಾದರಗಳು ಹೆಣ್ಣಿಗೂ ಲಭಿಸುತ್ತವೆ ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದರು.

ಜಿಲ್ಲಾ ಪರಿಷತ್ ಸದಸ್ಯೆ ಸುಪ್ರಿಯಾ ಕುಟ್ರೆ, ಬಿಜೆಪಿ ಕಾರ್ಯಕರ್ತ ಆನಂದ ಪಾಟೀಲ, ಬಾಳೇಶ ಚವಣ್ಣವರ, ಕಲ್ಲಪ್ಪ, ಅರ್ಜುನ್ ಗಾವಡ, ಮೋಹಿಶೇತ್ ಗ್ರಾಪಂ ಮಾಜಿ ಸದಸ್ಯೆರಾಮಕ್ಕ ಹಣಬರ, ಬಿಜಗರ್ಣಿ ಗ್ರಾಪಂ ಸದಸ್ಯೆ ಸಾವಿತ್ರಿ ಕಾಂಬಳೆ, ಉಪಾಧ್ಯಕ್ಷೆ ದುರ್ಗಾ ಸುತಾರ, ಸಂಜಯ ದೇಸಾಯಿ, ಪ್ರಚಾರಕ ಬಿಜಯ ಚವ್ಹಾಣ, ಧರ್ಮ ಪ್ರಸಾರಕಿ ಮಾಯಾ ಘಡಿ, ಸಮಾಜ ಸೇವಕ ಖೇಮರಾಜ್ ಗಡ್ಕರಿ, ಕೃಷ್ಣ ಖಂಡೇಕರ್, ಆಶಾ ಚವ್ಹಾಣ ಹಾಗೂ 300ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.

ಸಂಜಯ್ ಚವ್ಹಾಣ್ ನಮ್ಮ ಸನಾತನ ಹಿಂದೂ ಧರ್ಮವನ್ನು ರಕ್ಷಿಸುವಲ್ಲಿ ನಮ್ಮ ಹಬ್ಬಗಳು ಮತ್ತು ಅವುಗಳ ಮಹತ್ವದ ಬಗ್ಗೆ ಮಾತನಾಡಿದರು.

ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಥಳೀಯ ವಿವಿಧ ಗಣ್ಯರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

*ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ; CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*

https://pragati.taskdun.com/ramesh-jarakiholicd-casecbicm-basavaraj-bommaimeet/

ಉಪ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

https://pragati.taskdun.com/sub-road-construction-work-starts-in-hindalaga/

*ಅಬಕಾರಿ ಇನ್ಸ್ ಪೆಕ್ಟರ್ ನನ್ನೇ ಶೂಟ್ ಮಾಡಿ ಹತ್ಯೆಗೈದಿದ್ದ ಮಾಜಿ ಸಚಿವ; ಗೋಕಾಕ್ ಮಿಲ್ ಹತ್ಯಾಕಾಂಡದ ನೇತೃತ್ವ ವಹಿಸಿದ್ದೂ ಇದೇ ಶಾಸಕರು; ರಮೇಶ್ ಜಾರಕಿಹೊಳಿ ವಿರುದ್ಧ ಎಂ.ಲಕ್ಷ್ಮಣ್ ಗಂಭೀರ ಆರೋಪ*

https://pragati.taskdun.com/kpcc-m-lakshmanpress-meetramesh-jarakiholid-k-shivakumaraudio-bomb/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button