Latest

ಮದ್ಯ ಸರಬರಾಜು ವಾಹನ ಪಲ್ಟಿ; ರಸ್ತೆಯಲ್ಲಿ ಹರಿದ ಮದ್ಯದ ಹೊಳೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ವಾಹನವೊಂದು ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿರುವ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ನಡೆದಿದೆ.

ಅಪಘಾತದಿಂದಾಗಿ ಮದ್ಯದ ಬಾಟಲಿಗಳು ರಸ್ತೆ ಮದ್ಯೆ ಒಡೆದು ಬಿದ್ದಿದ್ದು, ಅಪಾರ ಪ್ರಮಾಣದ ಮದ್ಯ ರಸ್ತೆಯುದ್ದಕ್ಕೂ ಹೊಳೆಯಾಗಿ ಹರಿದಿದೆ.

Home add -Advt

ಚಿಕ್ಕಬಳ್ಳಾಪುರದ ಮದ್ಯ ಸಂಗ್ರಹಣಾ ಗೋಡೌನ್ ನಿಂದ ವೈನ್ ಶಾಪ್ ಗಳಿಗೆ ಮದ್ಯವನ್ನು ಸರಬರಾಜು ಮಾಡಲು ವಾಹನ ತೆರಳುತ್ತಿತ್ತು. ಈರದಿಮ್ಮನ ಕಣಿವೆ ಬಳಿ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಿಕ್ಕರ್ ತುಂಬಿದ ವಾಹನ ಪಲ್ಟಿಯಾಗಿದೆ. ಬಾಟಲಿಗಳ ಮಧ್ಯೆ ಸಿಲುಕಿಕೊಂಡಿದ್ದ ಚಾಲಕನನ್ನು ಪೊಲೀಸರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

Related Articles

Back to top button