
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಪ್ರೇಮಿಗಳ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಟಿ.ಸಿ.ಪಾಳ್ಯದಲ್ಲಿ ನಡೆದಿದೆ.
ಕೃಷ್ಣಕುಮಾರಿ (23) ಮೃತ ಯುವತಿ. ಕೃಷ್ಣಕುಮಾರಿ ಪ್ರಿಯತಮ ಸಂತೋಷ್ ಪ್ರೀತಿಸಿದ ಯುವತಿಯನ್ನೇ ಕೊಂದ ಯುವಕ. ಇಬ್ಬರೂ ನೇಪಾಳ ಮೂಲದವರಾಗಿದ್ದು, ಮೂರು ವರ್ಷಗಳಿಂದ ಇವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಸಂತೋಷ್, ಟಿ.ಸಿ.ಪಾಳ್ಯದಲ್ಲಿ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಂತೆ. ಯುವತಿ ಕೃಷ್ಣ ಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಇಬ್ಬರೂ ಬೆಂಗಳೂರಿನಗೆ ಬಂದು ರಾಮ ಮೂರ್ತಿ ನಗರದ ಟಿ.ಸಿ.ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಸಂತೋಷ್ ಕೃಷ್ಣಕುಮಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಬ್ಬರ ನಡುವೆ ಜಗಳವಾಗುತ್ತಿದೆ ಎಂದು ಕೃಷ್ಣ ಕುಮಾರಿ ತನ್ನ ಸ್ನೇಹಿತೆಗೆ ಕರೆ ಮಾಡಿ ಹೇಳಿದ್ದಳು. ಕೆಲ ಸಮಯದ ಬಳಿಕ ಕೃಷ್ಣಕುಮಾರಿ ಮೊಬೈಲ್ ನಿಂದ ಆಕೆಯ ಸ್ನೇಹಿತೆ ಮೊಬೈಲ್ ಗೆ ಕೃಷ್ಣ ಕುಮಾರಿ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ರವಾನೆಯಾಗಿದೆ. ತಕ್ಷಣ ಆಕೆ ತನ್ನ ಸ್ನೇಹಿತೆಯರಿಬ್ಬರ ಜೊತೆ ಕೃಷ್ಣ ಕುಮಾರಿ ರೂಮ್ ಗೆ ಬಂದಾಗ ಕೃಷ್ಣಕುಮಾರಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ತಕ್ಷಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಜೈಲು, 1ಲಕ್ಷ ರೂ. ದಂಡ