Belagavi NewsBelgaum NewsCrimeKannada NewsKarnataka NewsLatest

*ಸಂಬಂಧಿಕರ ಮನೆಗೆ ಕನ್ನ ಹಾಕಿದ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗರ ಮನೆಯಲ್ಲಿ ಕನ್ನ ಹಾಕಿದ್ದ ಕಳ್ಳನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದ ಅಮನ ನಗರ ಮತ್ತು ನ್ಯೂ ಗಾಂಧಿ ನಗರದಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಾಳಮಾರುತಿ ಪೊಲೀಸರು ಯಾಶಸ್ವಿಯಾಗಿದ್ದಾರೆ.‌

Home add -Advt

ಅಶ್ವಾಕ ಖಾಜಾಸಾಬ ಸಾಠಿ (42) ಬಂಧಿತ ಆರೋಪಿ. ಈತನಿಂದ ಸುಮಾರು 25,35,000 ರೂ ಮೌಲ್ಯದ  169 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಆರ್.ಗಡ್ಡಕರ ಪಿಎಸ್ಐ ಆನಂದ ಆದಗೊಂಡ, ಶ್ರೀಶೈಲ್ ಹುಳಗೇರಿ  ಉದಯ ಪಾಟೀಲ, ಪಿ.ಎಮ್.ಮೋಹಿತೆ ಹಾಗೂ ಪ್ರೋಬೇಷನರಿ ಪಿ.ಎಸ್.ಐ. ರವರಾದ ಪ್ರಸನ್ನಕುಮಾರ, ಸಿದ್ದಾರ್ಥ ಮಾಳಮಾರುತಿ ಪೊಲೀಸ್ ಠಾಣೆ ಬೆಳಗಾವಿ ಮತ್ತು ಸಿಬ್ಬಂದಿ ಬಸವರಾಜ ಬಸ್ತವಾಡ, ಅರುಣ ಕಾಂಬಳೆ, ಎಮ್.ಜಿ.ಕುರೇರ, ಜಗನ್ನಾಥ. ಭೋಸಲೆ, ಬಿ.ಎಮ್.ಕಲ್ಲಪ್ಪನವರ,  ಸಿ.ಜೆ.ಚಿನ್ನಪ್ಪಗೋಳ, ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ಮಹೇಶ ಒಡೆಯರ,  ಮಲ್ಲಿಕಾರ್ಜುನ ಗಾಡವಿ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಸೀದ, ದೀಪಕ ದೊಡಗೋನಿ ಕಾರ್ಯಕ್ಕೆ  ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ. 

Related Articles

Back to top button