ಪ್ರಗತಿವಾಹಿನಿ ಸುದ್ದಿ: ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಪೋಷಕರಲ್ಲಿ ಇದ್ದ ಗೊಂದಲಗಳಿಗೆ ಶಿಕ್ಷಣ ಇಲಾಖೆ ಕೊನೆಗೂ ತೆರೆ ಎಳೆದಿದೆ. 1ನೇ ತರಗತಿ ಪ್ರವೇಶಕ್ಕೆ ಇದ್ದ ಗರಿಷ್ಠ ವಯೋಮಿತಿ ಗೊಂದಲ ನಿವಾರಿಸಿರುವ ಇಲಾಖೆ ಎಲ್ ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಎಲ್ ಕೆಜಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 4ರಿಂದ6 ವರ್ಷ ನಿಗದಿ, ಯುಕೆಜಿ ಪ್ರವೇಶಕ್ಕೆ 5ರಿಂದ 7 ವರ್ಷ ನಿಗದಿ ಮಾಡಲಾಗಿದೆ. 1ನೇ ತರಗತಿ ಪ್ರವೇಶಕ್ಕೆ ಗರಿಷ್ಠ ವಯೋಮಿತಿ 6ರಿಂದ 8 ವರ್ಷ ನಿಗದಿಪಡಿಸಲಾಗಿದೆ.
8 ವರ್ಷ ಮೀರಿದರೂ ಶಾಲೆಗೆ ದಾಖಲಾಗದ ಮಕ್ಕಳನ್ನು ಶಾಲೆ ಬಿಟ್ಟ ಮಕ್ಕಳು ಎಂದು ಪರಿಗಣಿಸಿ ಅವರ ವಯಸ್ಸಿಗೆ ತಕ್ಕಂತೆ ತರಗತಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ