Latest

ಕೋವಿಡ್-೧೯ ತಡೆಗೆ ಸ್ಥಳಿಯ ಅಧಿಕಾರಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಿ

ಪ್ರಗತಿವಾಹಿನಿ ಸುದ್ದಿ, ಕಾರವಾರ -: ಕೋರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಗ್ರಾಮ, ಪಟ್ಟಣ ಮತ್ತು ತಾಲೂಕು ಮಟ್ಟದ ಸ್ಥಳಿಯ ಅಧಿಕಾರಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕೆಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಕೆ.ಪಿ.ಮೋಹನರಾಜ ಅವರು ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಾಲೂಕು ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಕೋರೋನಾ ವೈರಸ್ (ಕೋವಿಡ್-೧೯) ಕುರಿತು ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನೆ ಬಗ್ಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

ಇಂದಿನವರೆಗಗೂ ಲಾಕ್ ಡೌನ್ ಅನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದ್ದೀರಿ, ಮುಂದಿನ ಅವಧಿಗೂ ಕೂಡಾ ಇನ್ನೂ ಚೆನ್ನಾಗಿ ನಿಭಾಯಿಸತಕ್ಕದ್ದು, ಇದಕ್ಕೆ ಸರಿಯಾದ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಆಯಾ ಸ್ಥಳಿಯ ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲೇ ಇದ್ದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಮಾತನಾಡಿ ಗ್ರಾಮ ಮಟ್ಟದ ಆರೋಗ್ಯ ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಬೇಕು, ಆಶಾ ಕಾರ್ಯಕರ್ತೆಯರು ಪೋನ್ ಕರೆ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಬೇಕು, ಆರೋಗ್ಯ ತಪಾಸಣೆಯನ್ನು ಪುನಃ ಮಾಡಿ, ಸಲಹೆ ಸೂಚನೆಗಳಿದ್ದರೆ ಸಂಬಂಧಿಸಿದವರಿಂದ ಕೇಳಿ ಸ್ಥಳಿಯವಾಗಿ ಕಾರ್ಯನಿರ್ವಹಿಸಬೇಕೆಂದರು.

Home add -Advt

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಮುಂದಿನ ಹದಿನೈದು ದಿನಗಳಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರನ್ನು ಚೆಕ್ ಪೊಸ್ಟಗಳಲ್ಲಿ ತಡೆಹಿಡಿಯಿರಿ. ಒಂದು ವೇಳೆ ಜನರು ಬಂದಿದ್ದೆ ಆದಲ್ಲಿ ಅವರಿಗೆ ಪರ್ಯಾಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ, ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿ, ಪೊಲೀಸ್ ಇಲಾಖೆಯೊಂದಿಗೆ ತಹಶೀಲ್ದಾರರು ಸಹಕಾರ ನೀಡಿ ರೆಡ್, ಆರೇಂಜ್ ಮತ್ತು ಗ್ರೀನ್ ಜೋನ್‌ಗಳೆಂದು ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ಮಾಡಿಕೊಳ್ಳಬೇಕು. ರೆಡ್ ಜೋನ್ ದಲ್ಲಿ ಪ್ರತಿ ದಿನ, ಆರೇಂಜ್ ಜೋನ್ ದಲ್ಲಿ ವಾರದಲ್ಲಿ ಎರಡು ಬಾರಿ ಮತ್ತು ಗ್ರೀನ್ ಜೋನ್ ದಲ್ಲಿ ವಾರಕೊಮ್ಮೆ ಸಮೀಕ್ಷೆ ನಡೆಸಬೇಕು. ವಯೋವೃದ್ದರು, ಮಕ್ಕಳು ಮತ್ತು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರನ್ನು ವಿಶೇಷವಾಗಿ ಸಮೀಕ್ಷೆ ಮಾಡಬೇಕಲ್ಲದೇ, ಯಾವುದೇ ರೀತಿಯ ಸಾವುಗಳು ಸಂಭವಿಸಿದರೂ ಅದರ ಮಾಹಿತಿ ತಹಶೀಲ್ದಾರರು ಹೊಂದಿರಬೇಕಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರೋಶನ್, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ., ಸರ್ವೇಕ್ಷಣಾಧಿಕಾರಿ ಡಾ. ವಿನೋದ ಭೂತೆ  ಇತರರು ಇದ್ದರು.

Related Articles

Back to top button