ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಜುಲೈ 19ರಿಂದ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ?
ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಲಾಕ್ ಡೌನ್ ಆತಂಕವನ್ನು ತಂದಿಟ್ಟಿದೆ.
ಕರ್ನಾಟಕದಲ್ಲಿ 1500ಕ್ಕಿಳಿದಿದ್ದ ನಿತ್ಯದ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ 2500 – 3000ಕ್ಕೇರಿದೆ. ಕೇರಳದಲ್ಲಿ ಪ್ರತಿ ದಿನ 8 ಸಾವಿರಕ್ಕಿಳಿದಿದ್ದ ಸೋಂಕಿತರ ಸಂಖ್ಯ ಈಗ 15 ಸಾವಿರಕ್ಕೇರಿದೆ. ಮಹಾರಾಷ್ಟ್ರದಲ್ಲಿ 6 ಸಾವಿರಕ್ಕಿಳಿದಿದ್ದ ಸೋಂಕಿತರ ಸಂಖ್ಯೆ 9 ಸಾವಿರಕ್ಕೇರಿದೆ.
ಅನ್ ಲಾಕ್ ಜಾರಿಯಾದ ನಂತರ ಮೂರೂ ರಾಜ್ಯಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೋನಾ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲಿಯೂ ಪಾಲಿಸಲಾಗುತ್ತಿಲ್ಲ. ನಗರದ ರಸ್ತೆಗಳು ಸಂಚಾರದಟ್ಟಣೆಯಿಂದ ಕೂಡಿರುತ್ತವೆ. ಹಾಗಾಗಿ ಕೊರೋನಾ 3ನೇ ಅಲೆ ಈಗಲೇ ಬಂದು ಬಿಡುತ್ತದೆಯೇ ಎನ್ನುವ ಆಂತಕ ಹುಟ್ಟುಹಾಕಿದೆ.
ಇದರ ಜೊತೆಗೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮತ್ತೊಮ್ಮೆ ಲಾಕ್ ಡೌನ್ ಜಾರಿಮಾಡಬೇಕಾದ ಅನಿವಾರ್ಯತೆ ಬರಬಹುದು ಎನ್ನುವ ಎಚ್ಚರಿಕೆ ನೀಡಿದ್ದಾರೆ. ಅನ್ ಲಾಕ್ 3.O ಜಾರಿಗೊಳಿಸುವಾಗ ಕೇವಲ 2 ವಾರಕ್ಕಾಗಿ ( ಜುಲೈ 19ರ ವರೆಗೆ) ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಅಂದರೆ ಜುಲೈ 19ಕ್ಕೆ ಮತ್ತೊಮ್ಮೆ ಪರಿಷ್ಕರಿಸುವ ಅವಕಾಶವನ್ನು ಮುಖ್ಯಮಂತ್ರಿಗಳು ಉಳಿಸಿಕೊಂಡಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಇನ್ನು 10 ದಿನಗಳ ನಂತರ ಮತ್ತೊಮ್ಮೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಮಾಡುವ ಅನಿವಾರ್ಯತೆ ಬರಬಹುದೇ ಎನಿಸುತ್ತಿದೆ. ಜನರು ಎಚ್ಚರವಹಿಸದಿದ್ದರೆ, ಸೋಂಕಿನ ಪ್ರಮಾಣ ಇಳಿಯದಿದ್ದರೆ ನಾವೇ ಲಾಕ್ ಡೌನ್ ನತ್ತ ಮತ್ತೊಮ್ಮೆ ನಡೆಯಬೇಕಾದೀತು.
ಜುಲೈ 22ರಿಂದ ರಾಜ್ಯದಲ್ಲಿ ಸಾರ್ವತ್ರಿಕ ವರ್ಗಾವಣೆ
ಸೋಮವಾರದಿಂದ ರಾಜ್ಯಾದ್ಯಂತ ಅನ್ ಲಾಕ್ 3.0 ಜಾರಿ (Updated)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ