ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಿದ ಬೆನ್ನಲ್ಲೇ ಸಾವಿರಾರು ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮೆಜಸ್ಟಿಕ್ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಎರಡು ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಬಸ್ ಸೇವೆ ಪುನಾರಂಭ ಮುಂದೂಡಿಕೆಯಾಗಿದೆ.
ಈ ನಡುವೆ ಮೆಜೆಸ್ಟಿಕ್‍ನಲ್ಲಿ ಯಾದಗಿರಿ ಮೂಲದ ಗರ್ಭಿಣಿಯೊಬ್ಬರು ಪರದಾಟ ನಡೆಸಿದ್ದಾರೆ. ಯಾದಗಿರಿಗೆ ಹೋಗಲು ಗರ್ಭಿಣಿ ಕುಟುಂಬ ಮೆಜೆಸ್ಟಿಕ್‍ಗೆ ಬಂದಿದೆ. ಗರ್ಭಿಣಿಗೆ ಹೆರಿಗೆಗಾಗಿ ವೈದ್ಯೆರು ಮೂರು ದಿನ ಕಾಲ ಸಮಯ ಕೊಟ್ಟಿದ್ದಾರೆ. ಹೀಗಾಗಿ ಬೇಗ ಊರಿಗೆ ಸೇರೋಣ ಎಂಬುದು ಮಹಿಳೆಯ ಬಯಕೆ. ಇದೇ ಕಾರಣಕ್ಕೆ ಮೆಜೆಸ್ಟಿಕ್‍ಗೆ ಮಹಿಳೆ ತನ್ನ ಪತಿ ಹಾಗೂ ಮೊದಲ ಮಗುವಿನ ಜತೆ ಆಗಮಿಸಿದ್ದಾರೆ. ಆದರೆ ಬಸ್ ಸಂಚಾರ ಆರಂಭವಾಗುವ ಬಗ್ಗೆ ಇನ್ನೂ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ.
ಈ ಕುರಿತು ಮಾತನಾಡಿರುವ ಗರ್ಭಿಣಿ, ಹೆರಿಗೆಗೆ ಮೂರು ದಿನ ಟೈಮ್ ಕೊಟ್ಟಿದ್ದಾರೆ . ನಾನು ನಮ್ಮೂರಿಗೆ ಹೋಗಲೇಬೇಕು. ಇಲ್ಲಿದ್ದರೆ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ. ಆದರೆ ಇಲ್ಲಿ ಬಸ್‍ಗಳೇ ಶುರುವಾಗಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ