ಜುಲೈ ನಿಂದ ಶಾಲೆಗಳು ಆರಂಭ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್‍ಡೌನ್ ನಿಂದ ಮುಚ್ಚಿದ್ದ ಶಾಲೆಗಳು ಜುಲೈನಿಂದ ದೇಶಾದ್ಯಂತ ಆರಂಭವಾಗುವ ಸಾಧ್ಯತೆ ಇದೆ. ಶೇಕಡಾ 30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ನಡೆದಿದೆ.

ಗ್ರೀನ್, ಆರೆಂಜ್‍ಝೋನ್‍ಗಳಲ್ಲಿರುವ ಶಾಲೆಗಳನ್ನು ಮೊದಲು ಆರಂಭ ಮಾಡುವ ಬಗ್ಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ವಾರವೇ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Related Articles

ಶಾಲಾ-ಕಾಲೇಜ್ ಓಪನ್ ಮಾಡುವ ವಿಚಾರವಾಗಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಶಾಲೆಗಳು ಪ್ರಾರಂಭದ ಕುರಿತು ಚರ್ಚೆ ನಡೆಸಲಾಗುತ್ತದೆ. ಸಭೆ ಬಳಿಕ ಶಾಲೆಗಳ ಪ್ರಾರಂಭ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಬಹುತೇಕ ಜುಲೈ- ಆಗಸ್ಟ್ ನಲ್ಲಿ ಶಾಲೆಗಳು ಪ್ರಾರಂಭ ಮಾಡಲು ಇಲಾಖೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಪ್ರಾರಂಭಿಕ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

Home add -Advt

Related Articles

Back to top button