Kannada NewsKarnataka NewsLatestNational

*ಎಂಎಲ್ ಸಿ ಕಾರು ಅಪಘಾತ; ಓರ್ವ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ವಿಜಯವಾಡ; ಆಂಧ್ರ ವಿಧಾನ ಪರಿಷತ್ ಸದಸ್ಯ ಪರ್ವತರೆಡ್ಡಿ ಚಂದ್ರಶೇಖರ್ ರೆಡ್ಡಿ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಜಯವಾಡದಿಂದ ನಲ್ಲೂರಿಗೆ ತೆರಳುತ್ತಿದ್ದ ವೇಳೆ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಎಂಎಲ್ ಸಿ ಪರ್ವತರೆಡ್ಡಿ ಕಾರ್ಯದರ್ಶಿ ವೆಂಕಟೇಶ್ವರಲು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ಕಾರು ಚಾಲಕ ಹಾಗೂ ಎಂಎಲ್ ಸಿ ಇಬ್ಬರಿಗೂ ಗಂಭಿರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಲ್ಲೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


Related Articles

Back to top button