Belagavi NewsBelgaum NewsElection News

*ಕುಟುಂಬ ಸಮೇತ ಬಂದು ಮತದಾನ ಮಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ*

ಪ್ರಗತಿವಾಹಿನಿ ಸುದ್ದಿ: ನಮ್ಮ ಭವಿಷ್ಯದ ಭವ್ಯ ಭಾರತದ ನಿರ್ಮಾಣ ಕಾರ್ಯದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನವು ಬಹುಮುಖ್ಯವಾಗಿದ್ದು ಪ್ರತಿಯೊಬ್ಬ ನಾಗರಿಕನೂ ಈ ಪ್ರಕ್ರೀಯೆ ಯನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಅವರು ಇಂದು ಸ್ವಗ್ರಾಮವಾದ ಪಿ ಕೆ ನಾಗನೂರನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳಿ ಮತಚಲಾವಣೆ ಮಾಡಿದ ಬಳಿಕ ಮಾತನಾಡಿದ ಅವರು ಪ್ರಜೆಗಳಿಂದ,ಪ್ರಜೆಗಳಿಗಾಗಿ,ಜನಪ್ರತಿನಿಧಿಗಳ ಆಯ್ಕೆಮಾಡಲು ಇರುವ ಏಕ್ಯಕ ವ್ಯವಸ್ಥೆಯಿದಾಗಿದ್ದು ನಾವು ಆಯ್ಕೆಮಾಡುವ ನಮ್ಮ ಪ್ರತಿನಿಧಿ ನಮ್ಮ ಆಗೂಹೋಗುಗಳ ಕುರಿತು ಅರಿವಿರಬೇಕು ಲೋಕಸಭೆಯಲ್ಲಿ ನಮ್ಮ ಭಾಗದ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೇಳೆಯುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕೆಂದರು. ಆಗ ಮಾತ್ರ ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ನ್ಯಾಯನೀಡಲು ಸಾಧ್ಯವಾಗಲಿದೆ ಎಂದರು.

ಈ ವೇಳೆ ಯುವನಾಯಕ ಚಿದಾನಂದ ಸವದಿ,ಉದ್ಯಮಿ ಶಿವಕುಮಾರ ಸವದಿ,ಹಿರಿಯ ವಕೀಲರಾದ ಸಿದ್ದಾರೂಡ ಸವದಿ ಸೇರಿದಂತೆ ಕುಟುಂಬದ ಸದಸ್ಯರು ಇದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button