
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಂಡಾ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಗಾಂಜಾ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಜಾರ್ಖಂಡ ಮೂಲದ ಆರೋಪಿ ಪರಶುರಾಮ ಮಾಥೋ (24) ಎಂಬತಾನನ್ನು ಬಂಧಿಸಿ ಬ್ಯಾಗ್ ನಲ್ಲಿದ್ದ 55, 910 ರೂ ಮೌಲ್ಯದ 5. ಕೆ.ಜಿ 591 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಲಾಗಿದೆ.
ಈ ಬಗ್ಗೆ ಬೆಳಗಾವಿ ರೈಲ್ವೆ ಪೊಲೀಸ ಠಾಣೆಯ ಅಪರಾಧ ಸಂಖ್ಯೆ- 28/2025 ಕಲಂ- 20[b][ii][B] ಎನ್.ಡಿ.ಪಿ.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.




