ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಡುಗೆ ಅನಿಲ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಕೇವಲ 15ದಿನಗಳ ಅಂತರದಲ್ಲಿ 50 ರೂಪಾಯಿ ಏರಿಕೆಯಾಗಿದೆ. ಜನಸಾಮಾನ್ಯರ ಗಾಯದ ಮೆಲೆ ಮತ್ತೆ ಬರೆ ಎಳೆದಂತಾಗಿದೆ.
ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 25 ರೂಪಾಯಿಯಂತೆ ಏರಿಕೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 14.2ಕೆಜಿ ಸಿಲಿಂಡರ್ ದರ 887ರೂ ಏರಿಕೆಯಾಗಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ.
ದೇಶದ ಪ್ರಮುಖ ನಗರಗಳ ಗ್ಯಾಸ್ ಸಿಲಿಂಡರ್ ದರದ ಮಾಹಿತಿ ಇಲ್ಲಿದೆ:
ದೆಹಲಿಯಲ್ಲಿ ಅಡುಗೆ ಅನಿಲ ದರ 884.5 ರೂ, ಮುಂಬೈ-884.5ರೂ, ಚೆನ್ನೈ-900.5 ರೂ, ಲಕ್ನೋ-922.5 ರೂ ಅಹಮದಾಬಾದ್-891.5ರೂ, ಭೋಪಾಲ್-890.5 ರೂಪಾಯಿ ಆಗಿದೆ.
ಡಾ.ರಾಜ್, ವಿಷ್ಣು ವರ್ಧನ್, ಶಂಕರ್ ನಾಗ್ ಪುತ್ಥಳಿ ತೆರವಿಗೆ ಮುಂದಾದ ಪಾಲಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ