Kannada NewsKarnataka NewsLatest

*ನಾಳೆ ಖಗ್ರಾಸ ಚಂದ್ರಗ್ರಹಣ: ಪ್ರಮುಖ ದೇವಾಲಯಗಳು ಬಂದ್*

ಪ್ರಗತಿವಾಹಿನಿ ಸುದ್ದಿ: ನಾಳೆ ರಾತ್ರಿ ಖಗ್ರಾಸ ಚಂದ್ರಗ್ರಹಣ. ನಬೋಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಈ ವರ್ಷದ ಎರಡನೇ ಹಾಗೂ ಕೊನೆ ಚಂದ್ರಗ್ರಹಣ ಇದಾಗಿದೆ. ಭಾರತಲ್ಲಿ ಸಂಪೂರ್ಣವಾಗಿ ಚಂದ್ರಗ್ರಹಣ ಗೋಚರವಾಗಲಿದೆ.

ನಾಳೆ ರಾತ್ರಿ 9:58ಕ್ಕೆ ಗ್ರಹಣ ಆರಂಭವಾಗಲಿದ್ದು, ಸೆಪ್ಟೆಂಬರ್ 8ರ ಬೆಳಗಿನ ಜಾವ 1:31ಕ್ಕೆ ಗ್ರಹಣ ಮುಕ್ತಾಯವಾಗಲಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿವೆ.

Home add -Advt

ರಾಜ್ಯ ರಾಜಧಾನಿ ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಬನಶಂಕರಿ ದೇವಸ್ಥಾನ, ಕಾಡುಮಲ್ಲೇಶ್ವರ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಅಣ್ಣಮ್ಮ ದೇವಸ್ಥಾನ, ಬಂಡೆ ಮಹಾಕಾಳಿ ದೇವಸ್ಥಾನ , ರಾಜರಾಜೇಶ್ವರಿ ದೇವಸ್ಥಾನ, ಇಸ್ಕಾನ್ ದೇವಾಲಗಳು ಬಂದ್ ಆಗಿರಲಿದ್ದು, ಸೆ.೮ರಂದು ತೆರೆಯಲಿದೆ.

ಗ್ರಹಣ ಹಿನ್ನೆಯಲ್ಲಿ ನಾಡ ದೇವತೆ ಮೈಸೂರು ಚಾಮುಂಡಿ ದೇಗುಲ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕುದ್ರೋಳಿ ದೇವಾಲಯ, ಘಾಟಿ ಸುಬ್ರಹ್ಮಣ್ಯ, ಗೋಕರ್ಣ ಮಹಾಬಲೇಶ್ವರ, ಕೊಪ್ಪಳದ ಹೆಲಗೆಮ್ಮ ದೇವಸ್ಥಾನ, ಬೇಲೂರು ಚನ್ನಕೇಶ್ವ ದೇವಸ್ಥಾನ, ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನಗಳು ಬಂದ್ ಆಗಲಿವೆ.

ಇನ್ನು ತಿರುಪತಿಯ ತಿಮ್ಮಪ್ಪನ ದೇವಸ್ಥಾನ , ಅಯೋಧ್ಯೆ ಶ್ರೀರಾಮ ಮಂದಿರ ಕೂಡ ನಾಳೆ ಬಂದ್ ಆಗಲಿದ್ದು, ಸೋಮಾವರ ಮುಂಜಾನೆ 3 ಗಂಟೆಗೆ ಬಾಗಿಲು ತೆರೆಯಲಿದೆ.

Related Articles

Back to top button