Kannada NewsKarnataka NewsLatest

ಎಂ ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕರ್ನಾಟಕ ರಾಜ್ಯ ಎಂ ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಬೆಳಗಾವಿಯ  ಪಿ.ಆರ್.ರಡ್ಡಿ ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ.

ಇತ್ತೀಚೆಗೆ ನಡೆದ ಎಂ ಸ್ಯಾಂಡ್ ಉತ್ಪಾದಕರ ಸಭೆಯಲ್ಲಿ ಸಂಘ ರಚನೆಗೆ ನಿರ್ಧರಿಸಲಾಗಿದ್ದು, ನೊಂದಣಿಯನ್ನೂ ಮಾಡಿಸಲಾಗಿದೆ. ಮುಧೋಳದ  ರವೀಂದ್ರ ಹಿರೇಮಠ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿಯ ಅಜಯ ಪೂಜಾರಿ, ಬಾಗಲಕೋಟೆಯ ಸಂಜಯ್ ಸರನಾಯ್ಕ್,  ಬೈಲಹೊಂಗಲದ ಸಂಜು ಕುಪ್ಪಸಗೌಡ್ರ, ಬಾಗಲಕೋಟೆಯ ರಂಗನಾಥ ಭಜಂತ್ರಿ,  ಗೋಕಾಕದ ಚಂದ್ರಶೇಖರ ಕೊಣ್ಣೂರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಉದ್ಯಮಕ್ಕೆ ಬರುವ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಸಹ ಸಂಘದ ವತಿಯಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

 

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button