Kannada NewsKarnataka NewsLatest

ಮದನಕುಮಾರ ಭೈರಪ್ಪನವರ್ ಅಪಹರಣ: ಬೆಳಗಾವಿಯಲ್ಲಿ ತಲ್ಲಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ, ಶೃತಿ ಕನ್ಸ್ಟ್ರಕ್ಷನ್ ಮಾಲಿಕ ಮದನ್ ಕುಮಾರ ಭೈರಪ್ಪನವರ್ ಅವರನ್ನು ಅಪಹರಣ ಮಾಡಲಾಗಿದೆ.

ಇಂದು ಬೆಳಗ್ಗೆ ಮನೆಯಿಂದ ಕಚೇರಿಗೆ ಹೊರಟಿದ್ದ ಸಂದರ್ಭದಲ್ಲಿ 3 -4 ಜನ ಕಾರಿನಲ್ಲಿ ಬಂದು ಅವರನ್ನು ಕಾರು ಸಮೇತ ಅಪಹರಿಸಿದ್ದಾರೆ. ನಂತರ ಅವರ ಕಾರನ್ನು ಕಾಕತಿ ಬಳಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದಾರೆ.

Home add -Advt

ಆದರೆ ಮದನ್ ಕುಮಾರ ಅವರು ಎಲ್ಲಿದ್ದಾರೆ, ಯಾವಕಾರಣಕ್ಕಾಗಿ ಅಪಹರಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಪೊಲೀಸ್ ದೂರು ದಾಖಲಿಸಲಾಗಿದೆ.

ಮದನಕುಮಾರ ಅವರ ಮೊಬೈಲ್ ಒಮ್ಮೆ ರಿಂಗ್ ಆಗುತ್ತಿದೆ, ಮತ್ತೊಮ್ಮೆ ಎಂಗೇಜ್ ಬರುತ್ತಿದೆ. ಕಾರು ಪತ್ತೆಯಾಗಿದೆ. ಅವರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಅವರ ಸೋದರ ಮಾವ, ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಮದನ್ ಕುಮಾರ ಭೈರಪ್ಪನವರ್ ಶೀಘ್ರ ಪತ್ತೆಗೆ ಆಗ್ರಹಿಸಿ  ಕ್ರೆಡೈ ನಿಯೋಗ ಇನ್ನು ಸ್ವಲ್ಪ ಹೊತ್ತಿನಲ್ಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಕ್ವೈಸ್ ನೂರಾನಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಬೆಳಗಾವಿ ಪ್ರವಾಸ ಪಟ್ಟಿ

Related Articles

Back to top button