Latest

ಮಧ್ವಾಚಾರ್ಯರ ಬಗ್ಗೆ ವಾಟ್ಸಪ್ ನಲ್ಲಿ ಅವಹೇಳನಕಾರಿ ಹೇಳಿಕೆ; ಬ್ರಾಹ್ಮಣ ಮಹಾಸಭಾ ಖಂಡನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅದ್ವೈತ ಮಹಾ ಮಂಡಲದ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಶ್ರೀ ಮಧ್ವಾಚಾರ್ಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ವಾಟ್ಸಪ್ ನಲ್ಲಿ ಹರಿಯ ಬಿಟ್ಟಿರುವುದು ದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಈ ವಿಷಯದಲ್ಲಿ ಅನಗತ್ಯವಾಗಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರಭಾರತಿ ಸನ್ನಿಧಾನಂಗಳವರ ಹೆಸರನ್ನು ಎಳೆದು ತಂದು ಅವರ ಹೆಸರನ್ನು ದುರುಪಯೋಗಗೊಳಿಸಲಾಗಿದೆ, ಶೃಂಗೇರಿ ಶ್ರೀಗಳು ಎಂದಿಗೂ ಸಮಸ್ತ ಸನಾತನ ಸಂಸ್ಕೃತಿ ಮತ್ತು ಸರ್ವ ಜನರ ಒಳಿತನ್ನೇ ಬಯಸುವವರಾಗಿದ್ದರೆ ಹೊರತು ಈ ರೀತಿಯ ಸಮಾಜದ ಸ್ವಾಸ್ತ್ಯ ಕದಡುವಂಥ ಕಾರ್ಯಕ್ಕೆ ಎಂದಿಗೂ ಬೆಂಬಲ ನೀಡಲಾರರು. ಇದು ಶೃಂಗೇರಿಯ ಮಠಕ್ಕೆ ಸಂಬಂಧವಿಲ್ಲ ಎಂಬ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ.

ಎಲ್ಲ ಆಚಾರ್ಯರು ಸನಾತನ ಧರ್ಮ ಶಕ್ತಿಯುತವಾಗಿ ಬೇರೂರಲು ಕಾರಣಕರ್ತರಾಗಿದ್ದಾರೆ. ದೈವ ಸಾಕ್ಷತ್ಕಾರದ ಹಾದಿಯಲ್ಲಿ ಕರ್ಮ ಮಾರ್ಗ, ಭಕ್ತಿ ಮಾರ್ಗ, ಜ್ಞಾನ ಮಾರ್ಗ ಇವುಗಳು ಇವೆ. ಆಚಾರ್ಯರು ಈ ಮಾರ್ಗಗಳಿಗೆ ವಿವಿಧ ರೀತಿಯಲ್ಲಿ ಪ್ರಾಶಸ್ತ್ಯ ನೀಡಿರುತ್ತಾರೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗವೇ ಸೋಪಾನ ಎಂದು ಪ್ರತಿಪಾದಿಸಿದ ಮಹಾನುಭಾವರು ಶ್ರೀ ಮಧ್ವಾಚಾರ್ಯರು. 37 ಗ್ರಂಥಗಳನ್ನು ರಚಿಸಿ (ಸರ್ವಮೂಲ) ತತ್ವವನ್ನು ಪ್ರತಿಪಾದಿಸಿದರು. ಇವರ ತತ್ವವಾದವೆ ಮುಂದೆ ಭಕ್ತಿಪಂಥಕ್ಕೆ ಮತ್ತು ಹರಿದಾಸ ಪಂಥಕ್ಕೆ ಎಡೆ ಮಾಡಿಕೊಟ್ಟಿತು. ಭಗವದ್ಗೀಗೀತೆಗೆ ಬರೆದ ಭಾಷ್ಯದಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: “ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವವೇ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು. ಇಂತಹ ಮಹಾನುಭಾವರ ಬಗ್ಗೆ ದುರುಕ್ತಿಗಳನ್ನಾಡಿದರೆ ಶ್ರೇಯಸ್ಸು ಆಗುವುದಿಲ್ಲ ಎಂದು ಹೇಳಿದರು.

ಸಮಾಜದ ಸ್ವಾಸ್ತ್ಯ ಕದಡಿಸುವ ಹಾಗೂ ವಿವಿಧ ವ್ಯವಿಧ್ಯಮಯ ಸಂಪ್ರದಾಯವನ್ನು ಪಾಲಿಸುತ್ತ ಬಂದಿರುವ ಬಂಧು ಬಾಂಧವರ ನಡುವೆ ದ್ವೇಷ ಬಿತ್ತುವ ಕುಕೃತ್ಯವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸಿದೆ.

Home add -Advt

9ನೇ ತರಗತಿ ಪಠ್ಯ ಪುಸ್ತಕದಲ್ಲಿ ಬಸವಣ್ಣನ ಬಗ್ಗೆ ತಪ್ಪು ಮಾಹಿತಿ; ಬೆಳಗಾವಿಯಲ್ಲಿ ಲಿಂಗಾಯತ ಮಹಾಸಭಾ ಪ್ರತಿಭಟನೆ

Related Articles

Back to top button