
ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಪತಿ-ಪತ್ನಿಯರಿಬ್ಬರೂ ಒಟ್ಟಿಗೆ ಮದ್ರಾಸ್ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿರುವ ಅಪರೂಪದ ಘಟನೆ ನಡೆದಿದೆ.
ಜಸ್ಟಿಸ್ ಮುರಳಿ ಶಂಕರ್ ಕಪ್ಪುರಾಜು ಹಾಗೂ ಜಸ್ಟಿಸ್ ತಮಿಳ್ ಸೆಲ್ವಿ ಟಿ.ವಲಯಪಾಳಯಂ ಇತರ 8 ಜನರೊಂದಿಗೆ ಹೈಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮುರಳಿ ಶಂಕರ್ ತಿರುಚ್ಚಿಯಲ್ಲಿ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರೆ, ತಮಿಳುಸೆಲ್ವಿ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ರಿಜಿಸ್ಟ್ರಾರ್ ಹುದ್ದೆ ನಿಭಾಯಿಸಿದ್ದರು. 1996ರಲ್ಲಿ ಇಬ್ಬರೂ ವಿವಾಹವಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ