
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮ್ಯಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ ಆಹಾರ. ಅಪಾಯಕಾರಿ ರಾಸಾಯನಕವಿದೆ ಎಂಬ ಕಾರಣಕ್ಕೆ 6 ವರ್ಷಗಳ ಹಿಂದೆ ವಿವಾದಕ್ಕೀಡಾಗಿದ್ದ ಮ್ಯಾಗಿ ಹಾಗೂ ಈ ಉತ್ಪನ್ನ ತಯಾರಿಕಾ ಕಂಪನಿ ಈಗ ಮತ್ತೆ ಸುದ್ದಿಯಲ್ಲಿದೆ.
ಮ್ಯಾಗಿ ತಯಾರಿಸುವ ಕಂಪನಿ ನೆಸ್ಲೆ ಸಂಸ್ಥೆಯ ಅರ್ಧಕ್ಕೂ ಹೆಚ್ಚಿನ ಉತ್ಪನ್ನಗಳು ಆರೋಗ್ಯ ಮತ್ತು ಪೌಷ್ಠಿಕಾಂಶದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ತನ್ನ ಆಂತರಿಕ ದಾಖಲೆಯಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ದಿ ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ.
ನೆಸ್ಲೆಯ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ತನ್ನ ಶೇ.70ರಷ್ಟು ಉತ್ಪನ್ನಗಳು 3.5 ಸ್ಟಾರ್ ಪಡೆಯಲು ವಿಫಲವಾಗಿದೆ.3.5 ಸ್ಟಾರ್ ಆರೋಗ್ಯಕರ ಎಂದು ಹೇಳಲಾಗುತ್ತದೆ. ಪಾನೀಯ ವಿಭಾಗದಲ್ಲಿ ಶೇ.96ರಷ್ಟು ಉತ್ಪನ್ನಗಳು 3.5 ಸ್ಟಾರ್ ಗಳಿಗಿಂತಲೂ ಕಡಿಮೆ ರೇಟಿಂಗ್ ಪಡೆದಿವೆ.
ಛತ್ರಿ, ರೇನ್ಕೋಟ್ ಮಾರಾಟಕ್ಕೆ ಅವಕಾಶ