
ಪ್ರಗತಿವಾಹಿನಿ ಸುದ್ದಿ; ಲಕ್ನೋ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣವನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿದೆ.
ಈಗಾಗಲೇ ಉತ್ತರ ಪ್ರದೇಶ ಪೊಲೀಸರು ಪ್ರಕರಣ ಸಂಬಂಧ ಮಹಾಂತ ನರೇಂದ್ರ ಗಿರಿ ಅವರ ಇಬ್ಬರು ಶಿಷ್ಯಂದಿರನ್ನು ಬಂಧಿಸಿದ್ದು, ಇದೀಗ ಮತ್ತೋರ್ವ ಆರೋಪಿ ಸಂದೀಪ್ ತಿವಾರಿಯನ್ನು ಬಂಧಿಸಿದ್ದಾರೆ.
ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿತ್ತು. ಆದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಾರೆ.
ಭಾರತದ ಸಾಧುಗಳ ಅತಿದೊಡ್ಡ ಸಂಘಟನೆ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ ಶವ ಅಲಹಾಬಾದ್ ಬಾಘಂಬರಿ ಮಠದ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು. ಸ್ವಾಮೀಜಿ ಆತ್ಮಹತ್ಯೆ ಅವರ ಶಿಷ್ಯಂದಿರ ಒತ್ತಡ, ಪ್ರಚೋದನೆಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ನರೇಂದ್ರ ಗಿರಿಯವರ ಶಿಷ್ಯಂದಿರಾದ ಆನಂದ್ ಗಿರಿ ಹಾಗೂ ಆಧ್ಯ ಪ್ರಸಾದ್ ತಿವಾರಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇಂದು ಮತ್ತೋರ್ವ ಆರೋಪಿ ಸಂದೀಪ್ ತಿವಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಟ್ಟಿಗೆಯಿಂದ ಹೊಡೆದು ಹೆಂಡತಿ-ಮಗಳನ್ನು ಕೊಂದ ಗಂಡ