Kannada NewsKarnataka NewsLatest

ಅಥಣಿಯಲ್ಲಿ ಮಹಾರಾಷ್ಟ್ರ ಕೃಷಿ ಮಂತ್ರಿಯ ಸಕ್ಕರೆ ಕಾರ್ಖಾನೆ

ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆ ಮಾಡಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ರಾಜ್ಯದ ಕೃಷಿಮಂತ್ರಿ ವಿಶ್ವಜೀತ ಕದಮ್

ಪ್ರಗತಿವಾಹಿನಿ ಸುದ್ದಿ, ಅಥಣಿ:  ಕರ್ನಾಟಕದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟಿಲ್ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಬೆಂಬಲಿಗರೊಂದಿಗೆ ಬೃಹತ್ ಕಾರ್ಯಕ್ರಮಲ್ಲಿ ಭಾಗಿಯಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ಕೃಷಿ ಮಂತ್ರಿ ವಿಶ್ವಜೀತ ಕದಮ್ ಹೊಡಿಕೆಯ ಸಕ್ಕರೆ ಕಾರ್ಖಾನೆ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ನೂರಕ್ಕೂ ಅಧಿಕ ಜನರನ್ನು ಸೇರಿಸಿದ್ದಾರೆ.

ಸುಮಾರು ೨೫೦೦ ಮೆಟ್ರಿಕ್ ಟನ್ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆಯಲ್ಲಿ ಮಹಾರಾಷ್ಟ್ರದ ಸಚಿವರು, ಶಾಸಕರೊಂದಿಗೆ ಭಾಗಿಯಾದ ಕರ್ನಾಟಕದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲರು ಮಾತನಾಡಿ, ನಮ್ಮ ಭಾಗದಲ್ಲಿ ಕದಮ್ ಕುಟುಂಬ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾಗಿರುವುದು ನಮಗೆ ತುಂಬಾ ಖುಷಿಯಾಗಿದೆ. ಈ ಬಯಲು ಪ್ರದೇಶದಲ್ಲಿ ಯಾವುದೇ ಕಾರ್ಖಾನೆಗಳು ಇರ್ಲಿಲ್ಲ ಈ ಭಾಗದ ರೈತರಿಗೆ ಎಲ್ಲ ರೀತಿಯಿಂದಲೂ ಒಳ್ಳೆಯದಾಗುತ್ತದೆ. ಹಾಗೂ ಕಾರ್ಖಾನೆಯಲ್ಲಿ ಪ್ರತಿಶತ ೭೫ ರಷ್ಟು ಸ್ಥಳಿಯರಿಗೆ ಉದ್ಯೋಗ ನೀಡಬೇಕೆಂದು ಮಹಾರಾಷ್ಟ್ರದ ಸಚಿವರಿಗೆ ಮನವಿ ಮಾಡಿದರು.

ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರು ಬರಿದು ಆಗುವುದರಿಂದ ಇನ್ನು ಮುಂದೆ ಮಹಾರಾಷ್ಟ್ರದ ಕೃಷಿ ಸಚಿವರು ತಮ್ಮ ಕಾರ್ಖಾನೆ ಸಲುವಾಗಿಯಾದರೂ ಪ್ರತಿ ವರ್ಷವೂ ನದಿಗೆ ನೀರು ಹರಿಸುತ್ತಾರೆ ಎಂದು ಮಾತಿನ ಚಟಾಕಿ ಹಾರಿಸಿದರು. ಮತ್ತು ಬರಗಾಲದ ಈ ಪ್ರದೇಶ ಕೈಗಾರಿಕೆಗಳಿಂದ ಅಭಿವೃದ್ಧಿ ಆಗುತ್ತೆ ಎಂದು ತಿಳಿಸಿದರು.
ಹಾಗೂ ಇದೆ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಕೃಷಿಮಂತ್ರಿ ವಿಶ್ವಜೀತ ಕದಮ್, ತಮ್ಮ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಎಂದು ಹೆಳುತಿದ್ದಂತೆ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕದ ನೆಲ, ಜಲ ಬೇಕು. ಕರ್ನಾಟಕ ಭಾಗದಲ್ಲಿ ನಿಂತು ಜೈ ಮಹಾರಾಷ್ಟ್ರ ಎಂದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುವಂತಾಯಿತು. ಹಾಗೂ ಕಾರ್ಯಕ್ರಮದಲ್ಲಿ ಕನ್ನಡ ಬ್ಯಾನರ್ ಇಲ್ಲದೇ ಇರುವುದರಿಂದ ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಈ ವೇಳೆ ಎಮ್ ಎಲ್ ಸಿ ಮೋಹನರಾವ್ ಕದಮ್, ಜತ್ತ ಶಾಸಕ ವಿಕ್ರಮ ಸಾವಂತ, ಕಾರ್ಖಾನೆ ಯುನಿಟ್ ಚೇರ್ಮನ್ ರಘುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button