Latest

16 ವರ್ಷದ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಇಡೀ ದೇಶದ ಜನರೇ ತಲೆ ತಗ್ಗಿಸುವಂತಹ ಹೇಯ ಕೃತ್ಯ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಮೇಲೆ 400 ಮಂದಿ ಅತ್ಯಾಚಾರ ನೆಡೆಸಿರುವ ಘಟನೆ ಮಹಾರಾಷ್ಟ್ರದ ಬಿಡ್ ಜಿಲ್ಲೆಯಲ್ಲಿ ನಡೆದಿದೆ.

ಈ ಬಗ್ಗೆ ದೂರು ದಾಖಲಿಸಲು ಸಂತ್ರಸ್ತೆ ಅಂಬಾಜೋಗೈ ಪೊಲೀಸ್ ಠಾಣೆಗೆ ಬಂದರೆ ಪೊಲೀಸರು ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದೀಗ ಸಂತ್ರಸ್ತ ಯುವತಿ 2 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.

ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, ಐಪಿಸಿ ಸೆಕ್ಷನ್ ಸೆಕ್ಸುವೆಲ್ ಅಫೆನ್ಸ್ ಆಕ್ಟ್ ಹಾಗೂ ರೇಪ್ ಮತ್ತು ಕಿರುಕುಳ ಆರೋಪದಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಇದುವರೆಗೂ ಮೂವರನ್ನು ಬಂಧಿಸಿದ್ದಾರೆ ಎಂದು ಬಿಡ್ ಜಿಲ್ಲೆ ಎಸ್ ಪಿ ರಾಜಾ ರಾಮಸಾಮಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ತಾಯಿ ಕಳೆದುಕೊಂಡಿದ್ದ ಬಾಲಕಿಗೆ 8 ತಿಂಗಳ ಹಿಂದೆ ತಂದೆ ವಿವಾಹ ಮಾಡಿಸಿದ್ದರು. ಮದುವೆ ಬಳಿಕ ಪತಿ ಹಾಗೂ ಅತ್ತೆ ಮಾವ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡು ಹಲ್ಲೆ ನಡೆಸುತ್ತಿದ್ದರು. ಮನೆಯವರ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ತವರು ಮನೆಗೆ ವಾಪಸ್ ಆದರೆ ತಂದೆ ಮನೆಗೆ ಸೇರಿಸಲಿಲ್ಲ. ಇದರಿಂದ ಬೇರೆ ದಾರಿ ಕಾಣದೇ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಮುಂದಾಗಿದ್ದಾಳೆ. ಈ ಸಮಯದಲ್ಲಿ ಲೈಂಗಿಕ ಶೋಷಣೆ ನಡೆದಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎನ್ನಲಾಗಿದೆ.

Home add -Advt

Related Articles

Back to top button