Kannada NewsKarnataka NewsLatest

​ಸರ್ವಧರ್ಮಗಳ ಮಹಾತ್ಮರ ಚರಿತಾಮೃತ ಬೃಹತ್ ಗ್ರಂಥ ಸೆ.25ರಂದು ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಲ್ಲ ಧರ್ಮಗಳ ಪರಂಪರೆಯ ಮಹಾತ್ಮರ ಬೃಹತ್ ಗ್ರಂಥ ಇದೇ ತಿಂಗಳ ೨೫ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಪತ್ರಿಕಾ ಪರಿಷತ್ತಿನಲ್ಲಿಂದು ಮಾತನಾಡಿದ
ಅವರು ಅಥಣಿ ಮೋಟಗಿ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅವರು ರಚಿಸಿರುವ ೧೧೦೦ ಪುಟಗಳ
ಬೃಹತ್ ಗ್ರಂಥ ಇದಾಗಿದೆ. ಇದೊಂದು ನೂತನ ಪ್ರಯೋಗ ಎಂದು ಬಣ್ಣಿಸಿದ ಅವರು  ಬೆಂಗಳೂರಿನ
ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸೆಪ್ಟೆಂಬರ ೨೫ ರಂದು
ಮುಂಜಾನೆ ೧೦-೩೦ ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಲೋಕಾರ್ಪಣೆಗೊಳಿಸಲಿರುವ ಈ ಗ್ರಂಥದಲ್ಲಿ ಆದಿಕವಿ ವಾಲ್ಮೀಕಿಯಿಂದ ಆಧುನಿಕ ವಿಶ್ವ
ಪ್ರಸಿದ್ಧ ಕವಿ ರವೀಂದ್ರನಾಥರವರೆಗೆ ಅನೇಕ ಕವಿಗಳು ಮಹಾವೀರ ಬುದ್ಧ ಬಸವರಂಥ
ದಾರ್ಶನಿಕರು ಶಂಕರ ರಾಮಾನುಜ ಮಧ್ವ ರಂತಹ ಆಚಾರ್ಯರು ಯೇಸು ಮಹಮ್ಮದ್ ಗುರು ನಾನಕರಂತಹ ಧರ್ಮ ಪ್ರವರ್ತಕರು  ಜ್ಞಾನೇಶ್ವರ ತುಕಾರಾಮ ಸೇವಾಲಾಲ ರಾಮದಾಸರಂತಹ ಸಂತರು ಕನಕ ಪುರಂದರ ದಾಸರು ಅಕ್ಕ ಅಲ್ಲಮ ಸಿದ್ಧರಾಮೇಶ್ವರ ರಂತಹ ಯೋಗ ಸಾಧಕರು ರಬಿಯಾ ಅಂಡಾಳ್ ಮೀರಾ ಲಲ್ಲೆ?ಶ್ವರಿ ಯಿಂದ ಮೊದಲುಗೊಂಡು ಆಧುನಿಕ ಕಾಲದ ಸಜ್ಜಲಗುಡ್ಡದ ಶರಣಮ್ಮ  ಸೊನ್ನ ಲಾಪುರದ ರುದ್ರಮ್ಮ ಜಯದೇವಿತಾಯಿ ಅಂತಹ ಮಹಿಳಾ ಸಾಧಕಿಯರು ನಿಜಗುಣ ಸರ್ಪಭೂಷಣ ನಾಗಭೂಷಣ ಬಾಲಲೀಲಾ ಮಹಾಂತ ಶಿವಯೋಗಿ ಶಿಶುನಾಳ ಶರೀಫರಂಥ ತತ್ವಪದಕಾರರು ಖ್ವಾಜಾ ಬಂದೇ ನವಾಜ ರಂತಹ ಮಹಮ್ಮದೀಯ ಮೌಲ್ವಿಗಳು ಎಡೆಯೂರು ಸಿದ್ದಲಿಂಗೇಶ್ವರ ಅಥಣಿಯ ಮುರುಘಾಮಠ ಹಾನಗಲ್ಲ ಕುಮಾರಸ್ವಾಮಿಗಳ ಅದಿಯಾಗಿ ಇತ್ತೀಚಿನ ಡಾಕ್ಟರ್ ತೋಂಟದ ಸಿದ್ದಲಿಂಗ ಸ್ವಾಮಿಗಳ ವರೆಗೆ ಅನೇಕ ಸ್ವಾಮಿಗಳು ಅರವಿಂದ ರಮಣ ಮಹರ್ಷಿಗಳು ರಾಮಕೃಷ್ಣ ವಿವೇಕಾನಂದರಂಥ ಮಾದರಿ ಗುರುಶಿಷ್ಯರು ರಾಜಾರಾಮ್ ಮೋಹನ್ ರಾಯ್ ದಯಾನಂದ ಸರಸ್ವತಿ ಜ್ಯೋತಿಬಾ ಫುಲೆ ನಾರಾಯಣ ಗುರುಗಳಂತಹ ಸಮಾಜ ಸುಧಾರಕರು ಮಹಾತ್ಮಗಾಂಧಿ ಅಂಬೇಡ್ಕರ್ ಅವರಂಥ ದೇಶಭಕ್ತರ ಚರಿತ್ರೆಗಳಿವೆ ತತ್ವಜ್ಞಾನಿ ರಾನಡೆ ಇಸ್ಕಾನ್ ಪ್ರಭುಪಾದರು ಈಶ್ವರಿಯ ವಿಶ್ವವಿದ್ಯಾಲಯದ ಬ್ರಹ್ಮ ಬಾಬಾ , ಶಿರಡಿಯ ಸಾಯಿ ಬಾಬಾ ಮುಂತಾದ ೨೧೬ ಮಹಾತ್ಮರ ಚರಿತ್ರೆಗಳು  ಇವೆ , ಜಾತಿ ಮತ ಪಂಥ ಭಾಷೆ ಮತ್ತು ಗಡಿಗಳನ್ನು ಮೀರಿದ ಪ್ರಯತ್ನ
ಇದಾಗಿದೆ. ಜಾತಿ ಮತ ಪಂಥಗಳ ಸಂಕುಚಿತ ಮನೋಭಾವವನ್ನು ಅಸ್ಪೃಶ್ಯತೆ ಅಂಧಶ್ರದ್ಧೆ
ಅನಕ್ಷರಸ್ಥೆ ಗಳನ್ನು ನಿವಾರಿಸಲು ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದವರು ವಿವರಿಸಿದರು .
ಸಮಾರಂಭದ ಪಾವನ ಸಾನ್ನಿಧ್ಯದಲ್ಲಿ ಮೈಸೂರು ಸುತ್ತೂರು ಸಂಸ್ಥಾನ ಮಠದ ಶ್ರೀ ಶಿವರಾತ್ರಿ
ದೇಶೀಕೇಂದ್ರ ಮಹಾಸ್ವಾಮೀಜಿ ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ ತೋಂಟದ ಸಿದ್ಧರಾಮ
ಸ್ವಾಮೀಜಿ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ನಿರ್ಮಲಾನಂದನಾಥ ಸ್ವಾಮೀಜಿ ತುಮಕೂರು
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ
ಬಸವಲಿಂಗ ಪಟ್ಟದ್ದೇವರು ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ
ಉಪಸ್ಥಿತರಿರಲಿದ್ದಾರೆ .ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ವೋಚ್ಚ ನ್ಯಾಯಾಲಯದ
ವಿಶ್ರಾಂತ ನ್ಯಾಯಾಧೀಶ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನೆರವೇರಿಸಲಿದ್ದಾರೆ
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಾಜ್ಯದ ವಸತಿ ಸಚಿವ ವಿ ಸೋಮಣ್ಣ ವಹಿಸಲಿದ್ದಾರೆ
.ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಬಿ ಎಸ್ ಪರಮಶಿವಯ್ಯ
ಮುಖ್ಯ ಅತಿಥಿಗಳಾಗಿದ್ದು ಗ್ರಂಥದ ಕುರಿತು ವಿಶ್ರಾಂತ ಕುಲಪತಿ ಮಲ್ಲೇಶ್ವರಂ ವೆಂಕಟೇಶ್
ಮಾಡಿಕೊಡಲಿದ್ದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ  ಪ್ರಾಧಿಕಾರ ಮತ್ತು ಬಸವ
ವೇದಿಕೆಯ ಅಧ್ಯಕ್ಷ ಡಾ ಸಿ ಸೋಮಶೇಖರ ಆಶಯ ನುಡಿಗಳನ್ನಾಡುವರು.ಅತಿಥಿಗಳಾಗಿ ಮಾಜಿ
ಉಪಮುಖ್ಯಮಂತ್ರಿ ಲಕ್ಷ÷್ಮಣ ಸವದಿ ಅಥಣಿ ಶಾಸಕ ಮಹೇಶ ಕುಮಠಳ್ಳಿ ಸಾಹಿತಿ ಡಾ ಬೈರಮಂಗಲ
ರಾಮೇಗೌಡ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸಂಗೀತ ನಿರ್ದೇಶಕ ಹಂಸಲೇಖ ಅಥಣಿ
ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ ಎಲ್ ಪಾಟೀಲ ಮುಂತಾದವರು ಅತಿಥಿಗಳಾಗಿ
ಆಗಮಿಸಲಿದ್ದಾರೆ .
ಕಾರ್ಯಕ್ರಮದಲ್ಲಿ ಗ್ರಂಥ ದಾಸೋಹಿಗಳಾದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ
ನ್ಯಾ ಶಿವರಾಜ್ ಪಾಟೀಲ್, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಪ್ರಕಾಶ್ ಕಂಬತ್ತಳ್ಳಿ,
ಶಂಕರ್ ಕೋಳಿವಾಡ್, ಅನೀಲ ಸುಣದೋಳಿ, ಸುನೀಲ್ ಕಮತಗಿ ಮುಂತಾದವರನ್ನು ಗೌರವಿಸಲಾಗುತ್ತದೆ.
.
ವಿಶೇಷ ಆಹ್ವಾನಿತರಾಗಿ ನಾಡಿನ ನೂರಾರು ಮಠಗಳ  ಪೀಠಾಧಿಪತಿಗಳು ,,ಸ್ವಾಮೀಜಿಗಳು
ಆಗಮಿಸಲಿದ್ದಾರೆ ಎಂದು ಅವರು ಹೇಳಿದರು . ಗ್ರಂಥವೊಂದರ ಬಿಡುಗಡೆಗಾಗಿ ಇಷ್ಟೊಂದು
ಬೃಹತ್ ಸಂಖ್ಯೆಯ ವಿವಿಧ ಮಠಗಳ ನೂರಾರು ಪೀಠಾಧಿಪತಿಗಳು ಸೇರುತ್ತಿರುವುದು
ವಿಶೇಷವಾಗಿದೆ ಎಂದು  ಪತ್ರಿಕಾ ಪರಿಷತ್ ನಲ್ಲಿ ಉಪಸ್ಥಿತರಿದ್ದ  ಹುಕ್ಕೇರಿ ಮಠದ ಶ್ರೀ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ  ಅವರು ಬಣ್ಣಿಸಿದರು .
ಗ್ರಂಥ ಕರ್ತೃ ಅಥಣಿ ಮೋಟಗಿ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಗ್ರಂಥದ ಕುರಿತು  ವಿವರಣೆ
ನೀಡಿ ಕರೋನಾ ಕಾಲದ ೨ ವರ್ಷಗಳನ್ನು ಗ್ರಂಥ ರಚನೆಗಾಗಿ ಮೀಸಲಿಟ್ಟಿದ್ದೇನೆ.  ಇದೊಂದು
ನೂತನ ಪ್ರಯೋಗವಾಗಿದ್ಧು ಇದಕ್ಕಾಗಿ ೫೦೦ ಕ್ಕೂ ಅಧಿಕ ಪುಸ್ತಕಗಳ ಪರಾಮರ್ಶೆ ನಡೆಸಿ
ಮಾಹಿತಿ ಸಂಗ್ರಹಿಸಲಾಗಿದೆ. ಯಾವುದೇ ಗ್ರಂಥದಲ್ಲಿ ಮಾಹಿತಿ ಲಭ್ಯವಿಲ್ಲದ ಸಂದರ್ಭದಲ್ಲಿ
ಹಲವಾರು ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು .
ಈ ಕಾರ್ಯಕ್ರಮದಲ್ಲಿ ನಾಡಿನ ಎಲ್ಲ ಪೀಠ ಪರಂಪರೆಯ ಸ್ವಾಮಿಗಳು ಭಾಗವಹಿಸಲಿದ್ದಾರೆ
ಎಲೆಮರೆಯ ಕಾಯಿಯಂತಿದ್ದ ಹಲವಾರು ಮಹಾತ್ಮರನ್ನು ಬೆಳಕಿಗೆ ತರುವ ಕಾರ್ಯ ಕೂಡ ಈ
ಗ್ರಂಥದಲ್ಲಿ ಆಗಿದೆ ಎಂದು ಬೆಳಗಾವಿ ನಾಗನೂರು ಮಠದ ಪೀಠಾಧಿಪತಿ ಡಾ ಅಲ್ಲಮಪ್ರಭು
ಸ್ವಾಮೀಜಿ  ಹೇಳಿದರು.

ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಂಕರ್ ಗುಡುಸ ಸಾಹಿತಿ ಪ್ರಕಾಶ ಗಿರಿಮಲ್ಲನವರ ಪತ್ರಿಕಾ ಪರಿಷತ್ತಿನಲ್ಲಿ ಉಪಸ್ಥಿತರಿದ್ದರು .

ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವಕ್ಕೆ ಸಿಎಂ ಒಪ್ಪಿಗೆ – ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button