Latest

ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಗಂಡ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಬೇಸತ್ತ ಮಹಿಳೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದಿದೆ.

ಸಾಯಿ ಸಿಂಧು (27) ತನ್ನ 4 ವರ್ಷದ ಮಗಳು ಕಿರಣ್ಯ ಶ್ರೀಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಸಾಯಿ ಸಿಂಧು ಕಳೆದ 6 ವರ್ಷದ ಹಿಂದೆ ಬಾಲಮುರಗನ್ ದೇವಸ್ಥಾನದ ಅರ್ಚಕ ಸರವಣನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸಾಯಿ ಸಿಂಧು ಬಿ.ಇ ಪದವೀಧರೆಯಾಗಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.

ಸಿಂಧು ತನ್ನ ಪತಿ ತನ್ನ ಹಾಗೂ ಮಗುವನ್ನು ನಿರ್ಲಕ್ಷ್ಯ ಮಾಡುತ್ತಾನೆ. ಅತ್ತೆ ಮಾವನನ್ನು ಮಾತ್ರ ಪ್ರೀತಿಯಿಂದ ನೋಡುತ್ತಾನೆ ಎಂದು ಬೇಸರಗೊಂಡಿದ್ದಳು. ಸರವಣ ತಾಯಿಗೆ ಕಿಡ್ನಿ ವೈಫಲ್ಯವಾಗಿದ್ದು, ವೈದ್ಯರು 20 ಲಕ್ಷ ಹಣ ಹೊಂದಿಸಿಕೊಳ್ಳುವಂತೆ ತಿಳಿಸಿದ್ದರು. ಆದ್ದರಿಂದ ಸರವಣ ತನ್ನ ಒಂದು ನಿವೇಶನವನ್ನ 40 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ನಂತರ ತನ್ನ ಅನಾರೋಗ್ಯಪೀಡಿತ ತಂದೆ ತಾಯಿಯನ್ನ ಚಿಕಿತ್ಸೆಗಾಗಿ ತಮಿಳುನಾಡಿನ ಪಳನಿಗೆ ಬಿಟ್ಟು ಬರಲು ಹೋಗಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿಂಧು, ಮಗಳನ್ನು ಕೊಂದು ಬಳಿಕ ತಾನೂ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹಯೆಗೆ ಶರಣಾಗಿದ್ದಾಳೆ

Home add -Advt

 

Related Articles

Back to top button