Belagavi NewsBelgaum NewsPolitics

*ಅಥಣಿ ಜಿಲ್ಲೆ ಆಗದಿದ್ದರೆ ವಿಜಯಪುರಕ್ಕೆ  ಸೇರುತ್ತೇವೆ: ಮಹೇಶ ಕುಮಟಳ್ಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಜಿಲ್ಲೆ ಆಗದಿದ್ದರೆ ವಿಜಯಪುರಕ್ಕೆ ನಾವು ಸೇರ್ಪಡೆ ಆಗುತ್ತೇವೆ. ಅಥಣಿ ಜಿಲ್ಲೆ ಮಾಡದಿದ್ದರೆ ನಾವು ಬೆಳಗಾವಿಗೆ ಸೇರೊದಿಲ್ಲ‌ ಎಂದು ಅಥಣಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲಾ ವಿಭಜನೆ ಮಾಡಬೇಕಾಗಿ ಬಂದ್ರೆ ಅಥಣಿಯನ್ನೂ ಜಿಲ್ಲೆ ಮಾಡಬೇಕು. ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅಥಣಿ ಕೂಡ ಸಾಕಷ್ಟು ಅಭಿವೃದ್ಧಿ ಆಗಿದೆ. ಅಥಣಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದೆ. ಬೆಳಗಾವಿ ಜಿಲ್ಲೆಯ ಕೊನೆಯ ಗಡಿ ನಮ್ಮ ಅಥಣಿ ತಾಲ್ಲೂಕು. ಅಥಣಿಯಿಂದ ಕೊಟ್ಟಲಗಿ ಗ್ರಾಮ 40ಕಿ.ಮೀ ಇದೆ. ಅಥಣಿಯಿಂದ ಬೆಳಗಾವಿ 190 ಕಿಮೀ ಇದೆ. ನನ್ನ ಮತಕ್ಷೇತ್ರ ಮಹಾರಾಷ್ಟ್ರ, ವಿಜಯಪೂರ ಹೊಂದಿಕೊಂಡಿದೆ. ಆಡಳಿತಾತ್ಮಕವಾಗಿ ಮಾತ್ರ ಬೆಳಗಾವಿ ಸಂಪರ್ಕ ಇದೆ. ವ್ಯವಹಾರದ ವಿಚಾರವಾಗಿ ವಿಜಯಪುರ, ಮಹಾರಾಷ್ಟ್ರ ಸಂಪರ್ಕ ಹೊಂದಿದ್ದೇವೆ ಎಂದರು. 

ಅಥಣಿ ಜಿಲ್ಲೆ ಆಗದಿದ್ದರೆ ವಿಜಯಪುರಕ್ಕೆ ನಾವು ಸೇರ್ಪಡೆ ಆಗುತ್ತೇವೆ. ಅಥಣಿ ಜಿಲ್ಲೆ ಮಾಡದಿದ್ದರೆ ನಾವು  ಬೆಳಗಾವಿಗೆ ಸೇರೊದಿಲ್ಲ‌. ಅಥಣಿ ಜನರ ಪರಿಸ್ಥಿತಿ ಸರ್ಕಾರ ಅರ್ಥ ಮಾಡಿಕ್ಕೊಳ್ಳಬೇಕು‌. ನಮ್ಮದು ಸ್ಪಷ್ಟ ನಿಲುವಿದೆ ಹಾಗಾಗಿ ಅಥಣಿ ಜಿಲ್ಲೆ ಆಗಲೇಬೇಕು ಎಂದರು.

ಬಿಜೆಪಿಯಿಂದ ಯತ್ನಾಳ್ ಉಚ್ಛಾಟಣೆ ವಿಚಾರವಾಗಿ ಮಾತನಾಡಿದ ಅವರು, ಹೋರಾಟ ಏನಿಲ್ಲಾ ಬಿಜೆಪಿ ವರಿಷ್ಠರನ್ನ ವಿಶ್ವಾಸಕ್ಕೆ ತೆಗೆದುಕ್ಕೊಂಡು ಪಕ್ಷ ಕಟ್ಟುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

Home add -Advt

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೆ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕ್ಕೊಂಡು ಹೈಕಮಾಂಡ್ ನಿರ್ಣಯ ತೆಗೆದುಕ್ಕೊಳ್ಳುತ್ತೆ. ಯತ್ನಾಳ್ ಬಂದ್ರೆ ಒಳ್ಳೆಯದು ನಮ್ಮ ಗಡಿಭಾಗದಲ್ಲಿ ಅವರದೇ ಆದ ಪ್ರಭಾವ ಇದೆ. ಎಲ್ಲಾ ಸಮಾಜಗಳ ಪರವಾಗಿ ಮಾತನಾಡಿದವರು. ಯತ್ನಾಳ್ ಅವರಿಗೆ ಅವರದೆ ಆದ ಒಂದು ಪಡೆ ಇದೆ. ಎರಡೂ ಟೀಮ್ ವಿಶ್ವಾಸಕ್ಕೆ ಹೈಕಮಾಂಡ್ ನಿರ್ಣಯ ತೆಗೆದುಕ್ಕೊಳ್ಳಬೇಕು ಎಂದರು. 

Related Articles

Back to top button