Kannada NewsKarnataka NewsLatest
ನೀಟ್‌ನಲ್ಲಿ ಮಹೇಶ್ ಪಿಯು ಕಾಲೇಜಿಗೆ ರ‍್ಯಾಂಕ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಮಹೇಶ ಪದವಿ ಪೂರ್ವ ಕಾಲೇಜಿನ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೀಟ್ (ವೈದ್ಯಕೀಯ) ಪರೀಕ್ಷೆಯಲ್ಲಿ ಅರ್ಹತೆಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಅಲಿ ದರವಾಜಕರ 389, ಸ್ತುತಿ ಶೇತ್ವಾಲ 5386ನೇ ರ‍್ಯಾಂಕ್ ಗಳಿಸಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಸಾಧನೆ ತೋರಿದ್ದಾರೆ.
ಈ ಸಾಧನೆಗಾಗಿ ಆಡಳಿತ ಮಂಡಳಿ ಮುಖ್ಯಸ್ಥ ವಿನೋದಕುಮಾರ, ಪ್ರಾಚಾರ್ಯ ಎಂ ವಿ ಭಟ್ಟ , ಉಪ ಪ್ರಾಚಾರ್ಯ ಆನಂದ ಖೋತ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



