Kannada NewsLatest

ವಿದ್ಯಾರ್ಥಿ ಜೀವನದ ಅವಕಾಶಗಳ ಸದುಪಯೋಗ ಪಡೆಯಿರಿ: ಎಂಎಲ್ ಸಿ ನಾಗರಾಜ ಯಾದವ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಇಲ್ಲಿ ಸಿಗುವ ಅನೇಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದ ಒಂದೊಂದೇ ಯಶಸ್ಸಿನ ಮೆಟ್ಟಿಲೇರುತ್ತ ಧ್ಯೇಯವನ್ನು ಸಾಧಿಸಿಕೊಳ್ಳಬೇಕು,” ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇಲ್ಲಿನ ಪದವಿ ಮಹಾವಿದ್ಯಾಲಯದ ಕ್ರೀಡಾ ವಿವಿಧ ಸಂಘಗಳ ಚಟುವಟಿಕೆ ಉದ್ಘಾಟನೆ ಉದ್ಘಾಟಿಸಿ ಅವರು ಮಾತನಾಡಿದರು.

“ಮಹಾವಿದ್ಯಾಲಯದಲ್ಲಿರುವ ಎಲ್ಲ ಶಿಕ್ಷಕ ವೃಂದದ ಮಾರ್ಗದರ್ಶನ ಪಡೆಯುತ್ತ, ಇಲ್ಲಿರುವ ಎಲ್ಲ ಸಂಘಗಳ ಸ್ಪರ್ಧೆಗಳಲ್ಲಿ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತ ತಮಗೆ ಲಭಿಸುವ ಸುವರ್ಣಾವಕಾಶಗಳನ್ನು, ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ಯಬೇಕು,” ಎಂದು ಅವರು ಕಿವಿಮಾತು ಹೇಳಿದರು.

“ಜಾಗತೀಕರಣದ ಸಮಯದಲ್ಲಿ ವಿದ್ಯಾರ್ಥಿ ಜೀವನ ಒಂದು ಸವಾಲು. ಹಳ್ಳಿಯಲ್ಲಿ ಇದ್ದರೂ ಕೂಡ ಜಾಗತಿಕ ಮಟ್ಟದಲ್ಲಿ ಕೌಶಲಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು.  ವಿದ್ಯಾರ್ಥಿ ಜೀವನದಲ್ಲಿ ಬರುವ ಸಂಕಷ್ಟಗಳಿಗೆ, ಸವಾಲುಗಳಿಗೆ ಸೆಡ್ಡು ಹೊಡೆದು ಜೀವನ ರೂಪಿಸಿಕೊಳ್ಳಬೇಕು. ಅನೇಕ ಆದರ್ಶ ವ್ಯಕ್ತಿತ್ವಗಳ ಕುರಿತು ಅಧ್ಯಯನ ಮಾಡಿ ಅವರ ಆಲೋಚನೆಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.

ಕಾಲೇಜಿನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜಯಶ್ರೀ ಬಾಗೇವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಮರಾಠ ಮಂಡಳ ಸಂಸ್ಥೆಯ ಸದಸ್ಯ  ಶಿವಾಜಿ ಪಾಟೀಲ್ ಮಾತನಾಡಿ, “ಇನ್ನು ಮುಂದೆ ಮಹಾವಿದ್ಯಾಲಯದಲ್ಲಿ ಎಲ್ಲ ರೀತಿಯ ಸ್ಪರ್ಧೆಗಳು ಚಟುವಟಿಕೆಗಳು ಪ್ರಾರಂಭವಾಗಲಿವೆ ವಿದ್ಯಾರ್ಥಿಗಳು ಸಕ್ರಿಯವಾಗಿ ಅವುಗಳಲ್ಲಿ ಭಾಗವಹಿಸಬೇಕು,” ಎಂದು ಕರೆ ನೀಡಿದರು.

ಪರಶುರಾಮ ಗುರವ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಕ್ ಸಂಯೋಜಕಿ ಪ್ರೊ ವಿಜಯಲಕ್ಷ್ಮಿ ತಿರ್ಲಾಪುರ, ಪ್ರೊ. ಜಯಶ್ರೀ ಅಂಚಿ, ಪ್ರೊ. ದಬಾಲಿ, ಉಪಾಧ್ಯ, ಕುಲಕರ್ಣಿ, ಕುರಣಿ, ಬಿ.ಎಂ. ಪಾಟೀಲ್ , ವಿನಾಯಕ್  ಭಾತಕಾಂಡೆ, ಬನೋಸಿ, ಕಪಿಲ್ ಗುರವ, ಡಾ. ಗುರವ ಮುಂತಾದವರು ಉಪಸ್ಥಿತರಿದ್ದರು.

*NIAಯಿಂದ ಮತ್ತಿಬ್ಬರು ಶಂಕಿತ ಆರೋಪಿಗಳ ಬಂಧನ*

https://pragati.taskdun.com/mangalore-kukker-bomb-blast-casetwo-suspected-accused-arestednia/

25 ತಾಲೂಕುಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಸಿಎಂ ಸೂಚನೆ

https://pragati.taskdun.com/cm-instructs-to-set-up-mini-textile-park-in-25-taluks/

ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ; ಕಾಂಗ್ರೆಸ್ ಪ್ರಣಾಳಿಕೆ – ಡಿ.ಕೆ.ಶಿವಕುಮಾರ ಘೋಷಣೆ

https://pragati.taskdun.com/bharatiya-janata-party-today-has-become-a-corrupt-janata-party-dk-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button