ಈಶ್ವರ ಜಿ.ಸಂಪಗಾವಿ, ಕಕ್ಕೇರಿ, ಎಂ.ಕೆ.ಹುಬ್ಬಳ್ಳಿ: ಸಕ್ಕರೆ ಕಾರ್ಖಾನೆಗಳು ಬೆವರು ಸುರಿಸಿ ದುಡಿದ ರೈತರನ್ನು ಹೇಗೆ ಜೀವಂತ ಸಮಾಧಿ ಮಾಡುತ್ತಿವೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
ಸಚಿವರು, ಅಧಿಕಾರಿಗಳು ಬಂದಾಗೆಲ್ಲ ಸಕ್ಕರೆ ಕಾರ್ಖಾನೆ ಬಿಲ್ ಪಾವತಿಗೆ ಗಡುವಿನ ಮೇಲೆ ಗಡುವು ನೀಡುತ್ತಾರೆ. ಆದೆರ ರೈತರ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಈ ರೈತ ಕಳೆದ ವರ್ಷ ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಪೂರೈಸಿದ್ದ, ಆದ್ರೆ ಇದುವರೆಗೂ ಬಾಕಿ ಬಿಲ್‍ನ್ನು ಫ್ಯಾಕ್ಟರಿ ಅವರು ಪಾವತಿಸಿಲ್ಲ. ಇದರಿಂದ ಆಕ್ರೋಶಗೊಂಡಿರುವ ರೈತ ತನ್ನ ಕುಣಿಯನ್ನು ತಾನೇ ತೋಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಎಂಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಶಿವಪ್ಪ ಬೋಗುರ ಎಂಬ ರೈತ ಕಳೆದ ವರ್ಷ 114 ಟನ್ ಕಬ್ಬನ್ನು ಕಳಿಸಿದ್ದ. ಆದ್ರೆ ಫ್ಯಾಕ್ಟರಿ ಅವರು 85 ಸಾವಿರ ಬಾಕಿ ಬಿಲ್‍ನ್ನು ಇದುವರೆಗೂ ಪಾವತಿಸಿಲ್ಲ. ಇದರಿಂದ ಮನನೊಂದಿರುವ ರೈತ ತನ್ನ ಹೊಲದಲ್ಲಿ ತಾನೇ ಕುಣಿ ತೋಡಿಕೊಂಡು, ಕುಣಿಯಲ್ಲಿ ಮಣ್ಣು ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. “ದಯವಿಟ್ಟು ನನ್ನ ಬಾಕಿ ಬಿಲ್ ಕೊಡಿ ಇಲ್ಲ ಅಂದ್ರ, ಫ್ಯಾಕ್ಟರಿ ಡೈರೆಕ್ಟರ್, ಚೇರ್ಮನ್‍ಗೋಳು ಎಲ್ಲಾರು ಬಂದು ನನ್ನ ಮ್ಯಾಲ ಮಣ್ಣ ಮುಚ್ಚಾಕ ಆದ್ರೂ ಬರ್ರಿ “ಎಂದು ಅಳಲು ತೋಡಿಕೊಂಡಿದ್ದಾರೆ.
ನಿಜಕ್ಕೂ ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ರೈತರು ಕಷ್ಟ ಪಟ್ಟು ಬೆಳೆ ಬೆಳೆಯುತ್ತಾರೆ. ಮಕ್ಕಳ ಶಿಕ್ಷಣ, ಮದುವೆ, ಮನೆ ಕಟ್ಟುವುದು ಸೇರಿದಂತೆ ಏನೆನೋ ಆಸೆ ಇಟ್ಟುಕೊಂಡು ಕಬ್ಬನ್ನು ಫ್ಯಾಕ್ಟರಿಗೆ ಕಳಿಸಿದ್ರೆ, ಫ್ಯಾಕ್ಟರಿಯವರು ಮಾತ್ರ ರೈತರಿಗೆ ಕಬ್ಬಿನ ಬಿಲ್ ನೀಡದೇ ಸತಾಯಿಸುತ್ತಿದ್ದಾರೆ. ತಾವು ನಾಚಿಕೆ. ಮಾನ, ಮರ್ಯಾದೆ ಬಿಟ್ಟು ರೈತರ ಹಣ ನುಂಗಿ ನೀರು ಕುಡಿಯುತ್ತಾರೆ.
ಇದರಿಂದ ರೈತ ಶಿವಪ್ಪ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಫ್ಯಾಕ್ಟರಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾಳೆಯೊಳಗೆ ನನ್ನ ಬಾಕಿ ಹಣ ಕೊಡದಿದ್ರೆ ನನ್ನ ಮೇಲೆ ನಾನೇ ಮಣ್ಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ “ಎಂದು ಎಚ್ಚರಿಸಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ