Latest
ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿ ಬೆಂಗಳೂರಿಗೆ ಬಂದ ಖರ್ಗೆ; ಕಾಂಗ್ರೆಸ್ ನಾಯಕರಿಂದ ಬೃಹತ್ ಹಾರ ಹಾಕಿ ಭವ್ಯ ಸ್ವಾಗತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ದೇವನಹಳ್ಳಿಯ ಸಾದನಹಳ್ಳಿ ಟೋಲ್ ಗೇಟ್ ಬಳಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣ ಬೈರೇಗೌಡ ಮತ್ತಿತರ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.
ಈ ವೇಳೆ ಕಾರ್ಯಕರ್ತರು 3 ಕ್ರೇನ್ ಮೂಲಕ ಹಾರ ಹಾಗೂ 2 ಜೆಸಿಬಿಯಲ್ಲಿ ಸೇಬುಹಣ್ಣಿನ ಬೃಹ ಹಾರವ ಹಾಕಿ, ಹೂಮಳೆ ಗರೆದು ಬರಮಾಡಿಕೊಂಡರು.
https://pragati.taskdun.com/latest/pregnant-womansuicidebangalore/