
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ತಾಲೂಕಿನ ಟಿಪ್ಪುಸುಲ್ತಾನ ನಗರ ಜಯನಗರ ಮಚ್ಚೆ ಕ್ರಾಸ್ ಎದುರುಗಡೆ ಹುಂಚ್ಯಾನ ಜೈನ್ ಇಂಜಿನಿಯರಿಂಗ್ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಹುಲ ಬಸವರಾಜ ಸುತಾರ (ವಯಸ್ಸು 20 ವರ್ಷ ಸಾ: ಜಯನಗರ ಮಚ್ಚೆ ತಾ: ಬೆಳಗಾವಿ) ಬಂಧಿತ. ಆತನಿಂದ 31,875 ರೂ ಮೌಲ್ಯದ ಒಟ್ಟು 2.ಕೆ.ಜಿ 125 ಗ್ರಾಂ ಗಾಂಜಾ ಮಾದಕ ವಸ್ತುವನ್ನು ಹಾಗೂ ಮೊಟಾರ ಸೈಕಲ್ (ನಂಬರ್ ಕೆಎ 22 ಹೆಚ್‌ಜೆ 6930 ) ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಮತ್ತು ಅವರ ಸಿಬ್ಬಂದಿ ಭಾಗವಹಿಸಿದ್ದರು.
ಪೊಲೀಸ್ ಆಯುಕ್ತರು , ಉಪ ಪೊಲೀಸ್ ಆಯುಕ್ತರು (ಕಾ & ಸು), ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಾರ್ಗದರ್ಶನ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ