
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಗೆ ದಾರಿ ಬಿಡದೇ ಕಾರು ಚಾಲಕನೊಬ್ಬ ಉದ್ಧಟತನ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರು ಚಾಲಕನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಆಂಬುಲೆನ್ಸ್ ನಲ್ಲಿ ತರಲಾಗುತ್ತಿತ್ತು. ಮಾರ್ಗ ಮಧ್ಯೆ ಮೂಲ್ಕಿ ಬಳಿ ಆಂಬುಲೆನ್ಸ್ ಗೆ ದಾರಿ ಬಿಟ್ಟುಕೊಡದೇ ಕಾರು ಚಾಲಕನೊಬ್ಬ ಅಡ್ಡಾದಿಡ್ದಿಯಾಗಿ ಕಾರನ್ನು ಓಡಿಸಿ, ಆಂಬುಲೆನ್ಸ್ ಗೆ ಅಡ್ಡಿಯುಂಟುಮಾಡಿ ಹುಚ್ಚಾಟ ಮೆರೆದಿದ್ದಾರೆ.
ಉಡುಪಿವರೆಗೂ ಸುಮಾರು 40 ಕಿ.ಮೀವರೆಗೂ ಆಂಬುಲೆನ್ಸ್ ಗೆ ಸೈಡ್ ಬಿಟ್ಟುಕೊಡದೇ ತೊಂದರೆ ನೀಡಿದ್ದಾನೆ.ಆಂಬುಲೆನ್ಸ್ ನಲ್ಲಿದ್ದವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಇದೇ ಕಾರು ಚಾಲಕ ಬುಧವಾರ ರಾತ್ರಿ ಉಡುಪಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕರೆತರುತಿದ್ದ ಮತ್ತೊಂದು ಆಂಬುಲೆನ್ಸ್ ಗೂ ಅಡ್ಡಿ ಪಡಿಸಿದ್ದಾನೆ ಎಂದು ಆಂಬುಲೆನ್ಸ್ ಚಾಲಕ ಮಂಗಳೂರು ಪೊಲೀಸರಿಗೆದೂರು ನೀಡಿದ್ದಾನೆ.
ತುರ್ತು ಸೇವೆಯಲ್ಲಿದ್ದ ಆಂಬುಲೆನ್ಸ್ ಗೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರು ಚಾಲಕ ಅತ್ತಾವರ ಮೌನೀಶ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಕೆಂಡಾಮಂಡಲವಾಗಿದ್ದೇಕೆ? ಯಾರ ವಿರುದ್ಧ ಈ ಆಕ್ರೋಶ? ಇಲ್ಲಿದೆ ಪೂರ್ಣ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ