ಪ್ರಗತಿವಾಹಿನಿ ಸುದ್ದಿ: ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೊಗಿದ್ದ ನಾಲ್ವರು ಸೇರಿದಂತೆ ಐವರು ಸಾವನ್ನಪ್ಪಿರುವ ದಾರುಣ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಚಾರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವಾಹ ಗ್ರಾಮದಲ್ಲಿ ನಡೆದಿದೆ.
ಸುಂದರ್ ಕರ್ಮಾಲಿ (27) ಎಂಬಾತ ತನ್ನ ಪತ್ನಿ ರೂಪಾ ದೇವಿ ಜೊತೆಗೆ ಜಗಳ ಮಾಡಿದ್ದ. ಈ ವೇಳೆ ಕೋಪದಲ್ಲಿದ್ದ ರೂಪಾ ದೇವಿ ಬೈಕ್‌ನ್ನು ಬಾವಿಗೆ ಎಸೆದಿದ್ದಳು. ಅದನ್ನು ಹೊರಗೆ ತೆಗೆಯಲು ಸುಂದರ್ ಬಾವಿಗೆ ಹಾರಿದ್ದಾನೆ. ಪತಿ ಸಂಕಷ್ಟಕ್ಕೆ ಸಿಲುಕಿದ್ದನ್ನು ಕಂಡ ರೂಪಾ ದೇವಿ ಸಹಾಯಕ್ಕಾಗಿ ಕಿರುಚಾಟ ಆರಂಭಿಸಿದ್ದಾಳೆ. ಇದನ್ನು ಕೇಳಿದ ಇತರ ನಾಲ್ವರು ಒಬ್ಬರ ನಂತರ ಒಬ್ಬರು ಬಾವಿಗೆ ಇಳಿದವನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅವರೆಲ್ಲರೂ ಬಾವಿಯೊಳಗೆ ಸಾವನ್ನಪ್ಪಿದ್ದಾರೆ ಎಂದು ಬಿಷ್ಣುಗಢದ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಬಿಎನ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಮೃತ ನಾಲ್ವರನ್ನು ರಾಹುಲ್ ಕರ್ಮಾಲಿ, ವಿನಯ್ ಕರ್ಮಾಲಿ, ಪಂಕಜ್ ಕರ್ಮಾಲಿ ಮತ್ತು ಸೂರಜ್ ಭುಯಾನ್ ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ