ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಮಾನ ಪ್ರಯಾಣದ ವೇಳೆ ತನ್ನ ಲಗೇಜ್ ಹುಡುಕಲು ಬೆಂಗಳೂರು ಮೂಲದ ಟೆಕ್ಕಿಯೊಬ್ಬ ಇಂಡಿಗೋ ಏರ್ ಲೈನ್ಸ್ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿರುವ ಘಟನೆ ನಡೆದಿದೆ.
ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್ ವೇರ್ ಎಂಜಿನಿಯರ್ ನಾದನ್ ಕುಮಾರ್ ಅವರ ವಸ್ತುಗಳು ಸಹಪ್ರಯಾಣಿಕರೊಬ್ಬರಿಗೆ ಬದಲಾಗಿತ್ತು. ಲಗೆಜ್ ಹುಡುಕುವುದು ಸಾಧ್ಯವಾಗಿರಲಿಲ್ಲ. ತಕ್ಷಣ ಇಂಡಿಗೋ ಏರ್ ಲೈನ್ಸ್ ವೆಬ್ ಸೈಟ್ ನ್ನು ಹ್ಯಾಕ್ ಮಾಡುವ ಮೂಲಕ ತಮ್ಮ ಲಗೇಜ್ ನ್ನು ಮರಳಿ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಾದನ್, ಇಂಡಿಗೋ ವೆಬ್ ಸೈಟ್ ಭದ್ರತೆಯಲ್ಲಿನ ನ್ಯೂನ್ಯತೆಗಳಿಂದಾಗಿ ತಮ್ಮ ಲಗೇಜ್ ಹೇಗೆ ಹಿಂಪಡೆಯಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ. ನಾನು ನಿನ್ನೆ ಇಂಡಿಗೋ (SIC)6E-185 ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಈ ವೇಳೆ ನನ್ನ ಲಗೇಜ್ ಹಾಗೂ ಸಹ ಪ್ರಯಾಣಿಕರೊಬ್ಬರ ಬ್ಯಾಗ್ ಒಂದೇ ಬಣ್ಣ ಇದ್ದುದರಿಂದ ಇಬ್ಬರ ಲಗೇಜ್ ಅದಲು ಬದಲಾಗಿದೆ. ಅದನ್ನು ಮರಳಿ ಪಡೆಯಲು ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಲಗೆಜ್ ಪತ್ತೆ ಹಚ್ಚಲು ಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ, ಗ್ರಾಹಕ ಸೇವಾ ಕೇಂದ್ರ ಗೌಪ್ಯತೆ ಹಾಗೂ ಮಾಹಿತಿ ಭದ್ರತೆ ದೃಷ್ಟಿಯಿಂದ ವ್ಯಕ್ತಿಯ ಸಂಪರ್ಕವನ್ನೂ ಸಹ ನನಗೆ ತಿಳಿಸಲಿಲ್ಲ. ಮರುದಿನ ಪ್ರಯತ್ನಿಸಿದರೂ ಗ್ರಾಹಕ ಸೆವಾ ಕೇಂದ್ರ ಕರೆ ಸ್ವೀಕರಿಸಲಿಲ್ಲ. ಬೇರೆ ದಾರಿಯಿಲ್ಲದೇ ಸ್ವಪ್ರಯತ್ನಕ್ಕೆ ಮುಂದಾದೆ. ಸ್ವಾಫ್ಟ್ ವೇರ್ ಇಂಜಿನಿಯರ್ ಆಗಿದ್ದರಿಂದ ಹ್ಯಾಕಿಮ್ಗ್ ವಿಧಾನ ಬಳಸಿಕೊಂಡೆ. @INDIGO-6E ವೆಬ್ ಸೈಟ್ ನಲ್ಲಿ ಡೆವಲಪರ್ ಕನ್ಸೋಲ್ ನ್ನು ಎರೆದು ನೆಟ್ ವರ್ಕ್ ಲಾಗ್ ರೆಕಾರ್ಡ್ ಆನ್ (SIC)ನಲ್ಲಿ ಸಂಪೂರ್ಣ ಚೆಕ್-ಇನ್ ಫ್ಲೋ ಪ್ರಾರಂಭಿಸಿದೆ.
ಇದೇ ವೇಳೆ ಡೆವಲಪರ್ ಪರಿಕರಗಳ ಮೂಲಕ ಸಹ ಪ್ರಯಾಣಿಕನನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ನನ್ನ ಬ್ಯಾಗ್ ಸಹ ಮರಳಿ ಪಡೆದೆ ಎಂದು ವಿವರಿಸಿದ್ದಾರೆ.
ಶ್ರೀಶೈಲಂ ನಲ್ಲಿ ಸಂಘರ್ಷ; ನೂರಾರು ವಾಹನಗಳು ಜಖಂ; ಪರಿಸ್ಥಿತಿ ಉದ್ವಿಗ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ