ಪ್ರಗತಿವಾಹಿನಿ ಸುದ್ದಿ; ರಾಹುಲ್ ಎಂಬುದು ಭಾರತದಲ್ಲಿ ಮತ್ತು ಭಾರತೀಯ ಕ್ರಿಕೆಟ್ನಲ್ಲಿ ಜನಪ್ರಿಯ ಹೆಸರು. ಲೆಜೆಂಡರಿ ರಾಹುಲ್ ದ್ರಾವಿಡ್ ದೇಶಕ್ಕಾಗಿ ಇದುವರೆಗೆ ಆಡಿದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರೆ, ಇನ್ನೊಬ್ಬ ರಾಹುಲ್, ಇತ್ತೀಚಿನ ದಿನಗಳಲ್ಲಿ ಹೆಸರು ಮಾಡುತ್ತಿರುವ ಕರ್ನಾಟಕ ಮೂಲದ ಯುವ ಆಟಗಾರ. ಭಾರತ ತಂಡದ ಉಪನಾಯಕನಾಗಿರುವ ಕೆ.ಎಲ್. ರಾಹುಲ್ ಇದೀಗ ಕ್ರಿಕೆಟಿಗ ಕೆ.ಎಲ್ ರಾಹುಲ್ ತಮ್ಮ ಹೆಸರಿನ ಹಿಂದಿನ ಕಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಕೆ. ಎಲ್ ರಾಹುಲ್ ಅವರು ‘ರಾಹುಲ್’ ಎಂಬ ಹೆಸರನ್ನು ಹೇಗೆ ಪಡೆದರು ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ.
ತಂದೆ ಸುನೀಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ. ಗವಾಸ್ಕರ್ ತಮ್ಮ ಮಗನಿಗೆ ರೋಹನ್ ಎಂದು ಹೆಸರಿಟ್ಟಿದ್ದರಿಂದ ನನ್ನ ತಂದೆಯೂ ನನಗೆ ‘ರೋಹನ್’ ಎಂದು ಹೆಸರಿಡಲು ಬಯಸಿದ್ದರು. ಆದಾಗ್ಯೂ, ನನ್ನ ತಂದೆ ರೋಹನ್ ಹೆಸರನ್ನು ರಾಹುಲ್ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ತಪ್ಪು ಹೆಸರನ್ನು ಇಟ್ಟಿದ್ದಾರೆ ಎಂದು ಹೆಸರಿನ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ನನ್ನ ತಾಯಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಮತ್ತು 90ರ ದಶಕದಲ್ಲಿ ಶಾರುಖ್ ಕೆಲವು ಚಿತ್ರಗಳಲ್ಲಿ ಅವರ ಪಾತ್ರಗಳು ರಾಹುಲ್ ಆಗಿದ್ದವು. ಇದೇ ಕಥೆಯನ್ನು ನನ್ನ ತಾಯಿ ನನ್ನ ಜೀವನದ ಮತ್ತು ಹೆಸರಿನ ಜೊತೆ ಲಿಂಕ್ ಮಾಡಿದ್ದರು ಎಂದಿದ್ದಾರೆ.
ಲಗೆಜ್ ಪತ್ತೆ ಹಚ್ಚಲು ಇಂಡಿಗೋ ವೆಬ್ ಸೈಟ್ ನ್ನೆ ಹ್ಯಾಕ್ ಮಾಡಿದ ಭೂಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ