Kannada NewsKarnataka News
*ಕಾಂಗ್ರೆಸ್ ಪರ ಪ್ರಚಾರ ಮಾಡಿದಕ್ಕೆ ವ್ಯಕ್ತಿಯ ಹತ್ಯೆ?*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.
ಜಾವೀದ್ ಚಿನ್ನಮಳ್ಳಿ (27) ಎಂಬವರನ್ನು ಹತ್ಯೆಗೈದ ದುಷ್ಕರ್ಮಿಗಳು ಮೃತದೇಹವನ್ನು ಬಾವಿಗೆ ಎಸೆದಿದ್ದಾರೆ. ದುಷ್ಕರ್ಮಿಗಳು ಜಾವೀದ್ರನ್ನು ಅಮಾವಾಸ್ಯೆ ದಿನ ಪಾರ್ಟಿ ಮಾಡಲು ಕರೆದೊಯ್ದಿದ್ದರು. ಜಮೀನಿನಲ್ಲಿ ಪಾರ್ಟಿ ಮಾಡಿದ್ದರು. ನಂತರ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾರೆ. ಕಾಂಗ್ರೆಸ್ ಪರ ಮತ ಹಾಕಿಸಿದ್ದಕ್ಕೆ ಹತ್ಯೆಗೈದ ಆರೋಪ ಕೇಳಿಬಂದಿದೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.



