ಪ್ರಗತಿ ವಾಹಿನಿ ಸುದ್ದಿ, ಮಿಚಿಗನ್:
ಕಳ್ಳನೊಬ್ಬ ಬಾಡಿಗೆ ಕಾರ್ ಮಾಡಿಸಿಕೊಂಡು ಬ್ಯಾಂಕ್ ಎದುರು ನಿಲ್ಲಿಸಿ, ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದ. ಆದರೆ ಆತ ಬ್ಯಾಂಕಿಗೆ ಹೋಗಿದ್ದು ದರೋಡೆ ಮಾಡಲು !
ಇದು ಬಾಡಿಗೆ ಕಾರ್ ಚಾಲಕನಿಗೆ ತಿಳಿದಿದ್ದು ಪೊಲೀಸರ ತನಿಖೆಯ ವೇಳೆ.
ಹೌದು ಇಂಥದ್ದೊಂದು ವಿಚಿತ್ರ ಘಟನೆ ಅಮೇರಿಕದಲ್ಲಿ ನಡೆದಿದೆ. ಅಮೇರಿಕದ ಮಿಚಿಗನ್‍ನ ಸೌಥ್ ಫೀಲ್ಡ್‍ನ ಜಾಸನ್ ಕ್ರಿಸಮಸ್ (42) ಬಾಡಿಗೆ ಕಾರು ಪಡೆದು ದರೋಡೆ ಮಾಡಿದ ಕಳ್ಳ.
ಈತ ನ.16ರಂದು ಊಬರ್ ಕಾರೊಂದನ್ನು ಬಾಡಿಗೆ ಪಡೆದಿದ್ದ. ಬಳಿಕ ಅಲ್ಲಿನ ಹಂಟಿಂಗ್‍ಟನ್ ಬ್ಯಾಂಕ್ ಎದುರು ಕಾರ್ ನಿಲ್ಲಿಸಿ, ಕೆಲ ಹೊತ್ತು ಕಾಯುವಂತೆ ಊಬರ್ ಚಾಲಕನಿಗೆ ಬಲವಂತ ಮಾಡಿದ್ದ.
ಕೆಲ ಹೊತ್ತಿನ ಬಳಿಕ ಕಳ್ಳ ಜಾಸನ್ ಬ್ಯಾಂಕಿನಿಂದ ಹೊರ ಬಂದು ಅದೇ ಊಬರ್‍ನಲ್ಲಿ ಬೇರೊಂದು ಸ್ಥಳಕ್ಕೆ ತೆರಳಿದ್ದ. ಕಳುವು ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಜಾಸನ್‍ನ ಕಾರ್ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದ್ದು, ಆತ ಊಬರ್ ಬಾಡಿಗೆ ಪಡೆದು ದರೋಡೆ ನಡೆಸಿದ್ದು ತಿಳಿದುಬಂದಿದೆ.
ಊಬರ್ ಚಾಲಕ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಜಾಸನ್‍ನನ್ನು ಬಂಧಿಸಿದ್ದಾರೆ.
*ಗಡಿವಿವಾದ: ಕರ್ನಾಟಕವನ್ನು ಕೆರಳಿಸಿದ ಮಹಾರಾಷ್ಟ್ರ, ತುರ್ತು ಸಭೆ ನಡೆಸಿದ ಸಿಎಂ ಬೊಮ್ಮಾಯಿ*
https://pragati.taskdun.com/border-dispute-formation-of-a-team-of-strong-senior-lawyers-cm-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ