Kannada NewsKarnataka NewsLatest
*ಕಠಪೂರ್ತಿ ಕುಡಿದು ಬಸ್ ನಿಲ್ದಾಣದಲ್ಲಿ ಚಾಲಕನ ಹುಚ್ಚಾಟ: ಶರ್ಟ್, ಪ್ಯಾಂಟ್ ಬಿಚ್ಚಿ, ಶಿಳ್ಳೆ ಹೊಡೆದು ರಂಪಾಟ ಮಾಡಿದ ಡ್ರೈವರ್ ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಬಸ್ ನಿಲ್ದಾಣದಲ್ಲಿ ಹುಚ್ಚಾಟ ಮೆರೆದಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಕುಡಿದು ಬಂದ ಬಸ್ ಚಾಲಕ, ಬಸ್ ನಿಲ್ದಾಣದಲ್ಲಿ ಹುಚ್ಚಾಟ ಮಾಡಿದ್ದಾನೆ. ಶರ್ಟ್, ಪ್ಯಾಂಟ್ ಬಿಚ್ಚಿ, ಶಿಳ್ಳೆ ಹೊಡೆದು ಅಸಭ್ಯವಾಗಿ ವರ್ತಿಸಿದ್ದಲ್ಲದೇ ಪ್ರಯಾಣಿಕರಿಗೆ ಕಿರಿಕಿರಿಯುಂಟುಮಾಡಿದ್ದಾನೆ. ಚಾಲಕನ ವರ್ತನೆಗೆ ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಚಾಲಕನ ಪುಂಡಾಟ ಅತಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.