Kannada News

ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಮನವಿ

ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಮನವಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಮಹಾನಗರದ ಅಂಗಡಿಗಳ, ವಾಣಿಜ್ಯ ಸಂಸ್ಥೆಗಳ ಲೈಸನ್ಸ ನವೀಕರಣದ ಹಂತದಲ್ಲಿಯೇ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿರುವದನ್ನು ದೃಡಪಡಿಸಿಕೊಳ್ಳಬೇಕೆಂದು ನೃಪತುಂಗ ಯುವಕ ಸಂಘದ ಸದಸ್ಯರು ಇಂದು ಪಾಲಿಕೆಯ ಆಯುಕ್ತ  ಅಶೋಕ ದುಡಗಂಟಿ ಅವರನ್ನು ಆಗ್ರಹಿಸಿದ್ದಾರೆ.

ನೂತನ ಆಯುಕ್ತರಿಗೆ ಶಾಲು ಹೊದಿಸಿ ಶುಭಾಶಯ ಕೋರಿದ ಸಂಘದ ಪದಾಧಿಕಾರಿಗಳು, ನಾಮಫಲಕದ ಸಂಬಂಧ ಮನವಿಯೊಂದನ್ನು ಸಲ್ಲಿಸಿದರು.

1998 ರಲ್ಲಿ ಜಿ.ವ್ಹಿ. ಕೊಂಗವಾಡ ಅವರು ಜಿಲ್ಲಾಧಿಕಾರಿಗಳಾಗಿದ್ದಾಗ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಈ ಸಂಬಂಧ ನಿರ್ಣಯವನ್ನು ಮಂಡಿಸಿ ಅಂಗೀಕಾರವಾಗುವಂತೆ ಮಾಡಿದ್ದರು.

ಮಹಾನಗರ ಪಾಲಿಕೆಯು ಪ್ರತಿವರ್ಷ ಲೈಸನ್ಸ್ ಗಳನ್ನು ನವೀಕರಣ ಮಾಡುತ್ತದೆ. ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಭಾಗದಲ್ಲಿ ಕನ್ನಡ ಇರಬೇಕು. ಇನ್ನುಳಿದ ಭಾಗದಲ್ಲಿ ಇತರ ಭಾಷೆಗಳಲ್ಲಿ ಬರೆಸಬಹುದಾಗಿದೆ. ಆದರೆ ಬೆಳಗಾವಿಯಲ್ಲಿ ಕನ್ನಡವನ್ನು ಕಾಟಾಚಾರಕ್ಕೆ ಬರೆಸಲಾಗುತ್ತಿದೆ ಎಂದು ಸದಸ್ಯರು ಆಯುಕ್ತರಿಗೆ ವಿವರಿಸಿದರು.

Home add -Advt

ಈ ಸಂಬಂಧ ಅವಶ್ಯಕ ಕ್ರಮವನ್ನು ಕೈಕೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಸಾಗರ ಬೋರಗಲ್ಲ, ಪದಾಧಿಕಾರಿಗಳಾದ ಜಿನೇಶ ಅಪ್ಪನ್ನವರ, ಆದರ್ಶ ಅನಗೋಳ, ಸಂಪತ್ ದೇಸಾಯಿ, ಆನಂದ ಹುಲಬತ್ತೆ, ರಜತ ಅಂಕಲೆ, ಅಕ್ಷಯ ಪರಮಾಜ, ಶಿವಕುಮಾರ ರಾಠೋಡ, ನಿತಿನ್ ಮುಖರೆ, ರೋಹಿತ್ ವೀರಗೌಡ ಮತ್ತು ಸೂರಜ್ ಹುಲಬತ್ತೆ ಅವರು ಆಯುಕ್ತರಿಗೆ ಮನವಿ ಸಲ್ಲಿಸಿದರು./////

Related Articles

Back to top button