ಮಂಗಳೂರು ಬಾಂಬ್ ಪತ್ತೆ ಪ್ರಕರಣ: ಶಂಕಿತನ ಗುರುತು ಪತ್ತೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಶಂಕಿತನ ಗುರುತು ಪತ್ತೆಯಾಗಿದೆ.

ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾನೆ ಎಂಬ ಶಂಕಿತ 2018ರಲ್ಲಿ ಬೆಂಗಳೂರಿನಲ್ಲಿ ಹುಸಿ ಬಾಂಬ್​ ಕರೆ ಮಾಡಿದ್ದ ವ್ಯಕ್ತಿಯೇ ಈ ಕೃತ್ಯದಲ್ಲಿ ಕೂಡ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಹುಸಿ ಬಾಂಬ್​ ಕರೆ ಮಾಡಿದ್ದ ಶಂಕಿತ ಆರೋಪಿ ಈಗಾಗಾಲೇ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈ ವ್ಯಕ್ತಿಗೂ, ಮಂಗಳೂರಿನ ಬಾಂಬ್ ಪತ್ತೆ ಪ್ರಕರಣದ ಶಂಕಿತನಿಗೂ ಫೋಟೋದಲ್ಲಿ ಸಾಮ್ಯತೆ ಇದೆ ಎಂದು ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಈ ನಡುವೆ ಬಾಂಬ್​ ಇಟ್ಟ ಶಂಕಿತ ವ್ಯಕ್ತಿ ‘ರಾಜ್​ಕುಮಾರ್’​ ಬಸ್​ನಲ್ಲಿ ಮಂಗಳೂರಿನಿಂದ ಕೆಂಜಾರು ಜಂಕ್ಷನ್​ಗೆ ಬಂದು ಇಳಿದಿದ್ದ ಎಂದು ತಿಳಿದು ಬಂದಿದೆ. ಈ ಅಪರಿಚಿತ ವಿಧ್ವಂಸಕ ಕೃತ್ಯ ಎಸಗಲು 2 ಬ್ಯಾಗ್ ತಂದಿದ್ದ. ಕೆಂಜಾರು ಜಂಕ್ಷನ್​​​​​​​​ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 1 ಬ್ಯಾಗ್​ ಇಡಲು ಯತ್ನಿಸಿದ್ದ. ಸಂಕೀರ್ಣದ ಸೆಲೂನ್ ಅಂಗಡಿಯಲ್ಲೂ ಬಾಂಬ್​ ಇಡಲು ಯತ್ನಿಸಿದ್ದ. ಆದರೆ ಬ್ಯಾಗ್ ಇಡಲು ಸೆಲೂನ್ ಮಾಲೀಕ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದು ಬಂದಿದೆ.

ಏರ್ ಪೋರ್ಟ್ ಅಧಿಕಾರಿಗಳ ಮೇಲಿನ ಸೇಡಿಗೆ ಕೃತ್ಯ:
ಅಲ್ಲದೇ ಈ ಪ್ರಕರಣ ಸಂಬಂಧ ಇಂದು ಮಂಗಳೂರು ಏರ್​ಪೋರ್ಟ್​​ ಮ್ಯಾನೇಜರ್​ಗೆ ಉಡುಪಿಯ ಶಂಕಿತ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ನಿಮ್ಮ ಅಧಿಕಾರಿಗಳಿಂದ ನಾನು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ಕೆಲಸಕ್ಕಾಗಿ ಬಂದಿದ್ದವನಿಗೆ ಅಧಿಕಾರಿಗಳು ಕೆಲಾಸ ಸಿಗದಂತೆ ಮಾಡಿದ್ದಾರೆ.ಈ ಸೇಡು ತೀರಿಸಿಕೊಳ್ಳುತ್ತೇನೆ. ಅದಕ್ಕಾಗಿಯೇ ಏರ್​​ಪೋರ್ಟ್​ ಬಳಿ ಬಾಂಬ್ ಇಟ್ಟಿದ್ದು. ಇನ್ನೂ 2 ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button