ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಂಕಿತ ಶಾರಿಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆತ ಗಂಭೀರವಾಗಿ ಗಾಗೊಂಡಿದ್ದು ಕಂಕನವಾಡಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಈ ನಡುವೆ ಶಾರಿಕ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಮೂವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಶಾರಿಕ್ ಗುರುತು ಪತ್ತೆಹಚ್ಚಲು ಆತನ ಕುಟುಂಬದವರನ್ನು ಕರೆತರಲಾಗಿದ್ದು, ಆತನ ಚಿಕ್ಕಮ್ಮ ಹಾಗೂ ಸಹೋದರಿ ಆತ ಶಾರಿಕ್ ಎಂಬುದನ್ನು ಗುರುತು ಹಚ್ಚಿದ್ದಾರೆ.
ಈ ಮೂಲಕ ಶಿವಮೊಗ್ಗದ ತುಂಗಾನದಿ ದಡದಲ್ಲಿ ಬಾಂಬ್ ಸ್ಫೋಟ ನಡೆಸಿ ನಾಪತ್ತೆಯಾಗಿದ್ದ ಶಾರಿಕ್ ನೇ ಈಗ ಮಂಗಳೂರಿನಲ್ಲಿ ಬಾಂಬ್ ಸ್ಫೊಟಕ್ಕೆ ಯೋಜನೆ ರೂಪಿಸಿದ್ದ. ಬಾಂಬ್ ನ್ನು ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆಯೇ ಅದು ಸ್ಫೋಟಗೊಂಡಿದ್ದು, ಶಾರಿಕ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬುದು ಬಯಲಾಗಿದೆ.
ಮಂಗಳೂರು ಬಾಂಬ್ ಸ್ಫೋಟ; ಶಂಕಿತರ ಮನೆ ಮೇಲೆ ಪೊಲೀಸರ ದಾಳಿ
https://pragati.taskdun.com/mangalore-bomb-blast-casepolice-raidshivamogga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ